ಬಟುಮಿ (ಜಾರ್ಜಿಯಾ): ಭಾರತದ ಐಎಂ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಚೀನಾದ ಪ್ರಬಲ ಆಟಗಾರ್ತಿ ಜುನೆರ್ ಝು ಅವರನ್ನು ಬುಧವಾರ ಮಣಿಸಿದರು.

ಎರಡನೇ ಶ್ರೇಯಾಂಕದ ಜುನೆರ್ ಎದುರಿನ ಮರು ಪಂದ್ಯವನ್ನು ಡ್ರಾ ಮಾಡಿಕೊಂಡರೂ ದಿವ್ಯಾ ಅವರು ಎಂಟರ ಘಟ್ಟಕೆ ಮುನ್ನಡೆಯಲಿದ್ದಾರೆ.

ಭಾರತದ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರು ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ (ಸ್ವಿಟ್ಜರ್ಲೆಂಡ್) ಜೊತೆ ಪ್ರಯಾಸದ ಡ್ರಾ ಸಾಧಿಸಿದರು.
ಕಣದಲ್ಲಿರುವ ಭಾರತದ ಮತ್ತೊಬ್ಬ ಆಟಗಾರ್ತಿ ಆರ್. ವೈಶಾಲಿ ಅವರು ಕಜಕಸ್ತಾನದ ಮೆರಯುರ್ಟ್ ಕಮಲಿದೆನೋವಾ ಜೊತೆ ಡ್ರಾ ಸಾಧಿಸಿದರು. ಫಿಡೆ ಪ್ರತಿನಿಧಿಸುತ್ತಿರುವ ರಷ್ಯನ್ ಆಟಗಾರ್ತಿ ಕ್ಯಾಥರಿನಾ ಲಾಗ್ನೊ ಅವರು ಭಾರತದ ದ್ರೋಣವಲ್ಲಿ ಹಾರಿಕಾ ಜೊತೆ ಪಾಯಿಂಟ್ ಹಂಚಿಕೊಂಡರು.

ಟೂರ್ನಿಯ ಪ್ರತಿ ಸುತ್ತು ಎರಡು ಕ್ಲಾಸಿಕಲ್ ಪಂದ್ಯಗಳನ್ನು ಒಳಗೊಂಡಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.