ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಭೂವಿಜ್ಞಾನಿ KS ಪ್ರತಿಮಾ ಕೊಲೆಗೆ ಕಾರಣ ಬಹಿರಂಗ!

ಆರೋಪಿ ಬೆಂಗಳೂರಿನ ಕೋಣನಕುಂಟೆ ಬಳಿಯ ಜಂಬೂ ಸವಾರಿ ದಿಣ್ಣೆಯ ನಿವಾಸಿ ಕಿರಣ್
Published 6 ನವೆಂಬರ್ 2023, 13:04 IST
Last Updated 6 ನವೆಂಬರ್ 2023, 13:04 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರತಿಮಾ ಅವರ ಬಳಿ ಈ ಮೊದಲು ಚಾಲಕನಾಗಿದ್ದ ಕಿರಣ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ರತಿಮಾ ಅವರ ಕೊಲೆಗೆ ಕಾರಣ ತಿಳಿದು ಬಂದಿದ್ದು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರಿನ ಕೋಣನಕುಂಟೆ ಬಳಿಯ ಜಂಬೂ ಸವಾರಿ ದಿಣ್ಣೆಯ ನಿವಾಸಿ ಕಿರಣ್, ಈ ಮೊದಲು ಪ್ರತಿಮಾ ಬಳಿ ಕಾರು ಚಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ಹಲವು ದಿನಗಳ ಹಿಂದೆ ಕೆಲಸದಿಂದ ತೆಗೆಯಲಾಗಿತ್ತು. ವಾಪಸು ಕೆಲಸಕ್ಕೆ ತೆಗೆದುಕೊಳ್ಳುವಂತೆ ಪ್ರತಿಮಾ ಅವರ ಬೆನ್ನು ಬಿದ್ದಿದ್ದ. ಆದರೆ, ಪ್ರತಿಮಾ ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ. ಅದೇ ಕಾರಣಕ್ಕೆ‌ ಕೋಪಗೊಂಡು ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲಸದಿಂದ ತೆಗೆದಿದ್ದರಿಂದ ಕೋಪಗೊಂಡು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದರು.

ಪ್ರತಿಮಾ ಕೊಲೆ ಆರೋಪಿ ಕಿರಣ್‌ನನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ ಕೊಲೆ‌ ಮಾಡಿದ್ದ ಈತ, ಮುಡಿ ಕೊಡಲು ಮಲೆ‌ ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜೊತೆ ಹೋಗಿದ್ದ. ಭಾನುವಾರ ಮಧ್ಯಾಹ್ನವೇ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಪೊಲೀಸರು, ಕಿರಣ್‌ನನ್ನು ಬಂಧಿಸಿದ್ದಾರೆ.

ಕಿರಣ್

ಕಿರಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT