ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಕಾಂಗ್ರೆಸ್ ಪ್ರಚಾರ ಗೀತೆ ಬಿಡುಗಡೆ

Published 15 ಏಪ್ರಿಲ್ 2024, 14:59 IST
Last Updated 15 ಏಪ್ರಿಲ್ 2024, 14:59 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗಾಗಿ ತನ್ನ ಪ್ರಚಾರ ಗೀತೆಯನ್ನು ಸೋಮವಾರ ಬಿಡುಗಡೆ ಮಾಡಿದೆ. ಮಹಿಳೆಯರು, ಯುವಜನತೆ, ರೈತರು ಮತ್ತು ಕಾರ್ಮಿಕರಿಗಾಗಿ ‘ನ್ಯಾಯ’ ಎನ್ನುವ ಪರಿಕಲ್ಪನೆಯನ್ನು ಆಧರಿಸಿ ಪ್ರಚಾರ ಗೀತೆ ರೂಪಿಸಲಾಗಿದೆ.    

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ವಕ್ತಾರರಾದ ಸುಪ್ರಿಯಾ ಶ್ರೀನೇತ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದರು.   

‘ಕಾಂಗ್ರೆಸ್ ಪಕ್ಷವು ಭರವಸೆ ನೀಡಿರುವ ನ್ಯಾಯದ ಐದು ಸ್ತಂಭಗಳನ್ನು ಆಧರಿಸಿ ನಮ್ಮ ಪ್ರಚಾರ ನಡೆಯಲಿದೆ. ಜನರನ್ನು ಮಾತನಾಡಿಸಿ, ಅವರ ಕನಸು, ಆಸೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯದ ಸ್ತಂಭಗಳನ್ನು ರೂಪಿಸಿದ್ದೇವೆ. ಮೋದಿ ಅವರು ಜನರನ್ನು ವಂಚಿಸಿದ ಪ್ರತಿ ವಿಷಯದ ಬಗ್ಗೆಯೂ ನಾವು ಮಾತನಾಡುತ್ತೇವೆ’ ಎಂದು ಸುಪ್ರಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT