ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಗೊಂಡ ಮೊದಲ ದಿನ ₹24.60 ಕೋಟಿ ಗಳಿಸಿದ ಹೃತಿಕ್‌ ಅಭಿನಯದ ‘ಫೈಟರ್‌’

Published 26 ಜನವರಿ 2024, 13:19 IST
Last Updated 26 ಜನವರಿ 2024, 13:19 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾವು ಬಿಡುಗಡೆಯಾದ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ₹24.60 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

‘ಪಠಾಣ್‌’ ಮತ್ತು ‘ವಾರ್‌’ ಚಿತ್ರಗಳ ಖ್ಯಾತಿಯ ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿರುವ ಈ ಚಿತ್ರವು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಗೌರವ, ಪ್ರಶಂಸೆಯನ್ನು ಸಲ್ಲಿಸುವ ಕಥೆಯನ್ನು ಒಳಗೊಂಡಿದೆ.

ಫೈಟರ್‌ ಚಿತ್ರವು ನಿನ್ನೆ (ಗುರುವಾರ) ತೆರೆಕಂಡಿತು.

‘ಫೈಟರ್‌’ ಮೊದಲ ದಿನದಿಂದ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಬಲವಾದ ಹಜ್ಜೆಗಳನ್ನು ಇಟ್ಟಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನ ₹24.60 ಕೋಟಿ ಸಂಗ್ರಹಿಸಿದೆ’ ಎಂದು ನಿರ್ಮಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಯುಪಡೆಯ ಅಧಿಕಾರಿ ಮಿನಲ್‌ ರಾಥೋರ್‌ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಶ್ಯಾಮ್‌ಶೇರ್‌ ಪಟಾನಿಯಾ ಪಾತ್ರದಲ್ಲಿ ನಟ ಹೃತಿಕ್‌ ರೋಷನ್‌ ಅಭಿನಯಿಸಿದ್ದಾರೆ. ನಟ ಅನಿಲ್‌ ಕಪೂರ್‌ ವಾಯುಪಡೆಯ ಅಧಿಕಾರಿ (ಐಎಎಫ್) ರಾಕೇಶ್‌ ಜೈ ಸಿಂಗ್‌ (ರಾಕಿ) ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಅಕ್ಷಯ್ ಒಬೆರಾಯ್, ಕರಣ್ ಸಿಂಗ್ ಗ್ರೋವರ್ ಮತ್ತು ಸಂಜೀದಾ ಶೇಖ್ ಕೂಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT