ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ಹಿಂಸಾಚಾರ ಶೇ 77 ರಷ್ಟು ಕಡಿಮೆಯಾಗಿದೆ: ಕೇಂದ್ರ ಸರ್ಕಾರ

Last Updated 14 ಮಾರ್ಚ್ 2023, 10:40 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 12 ವರ್ಷಗಳಲ್ಲಿ ಭಾರತದಲ್ಲಿ ನಕ್ಸಲ್ ಹಿಂಸಾಚಾರ ಶೇ 77ರಷ್ಟು ಕಡಿಮೆಯಾಗಿದೆ ಮತ್ತು ಇದರಿಂದ ಸಾವಿನ ಪ್ರಮಾಣವೂ ಶೇ 90ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

ನಕ್ಸಲ್‌ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ ಮತ್ತು 2022 ರಲ್ಲಿ 45 ಜಿಲ್ಲೆಗಳ 176 ಪೊಲೀಸ್ ಠಾಣೆಗಳು ಮಾತ್ರ ಈ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿವೆ. 2010 ರಲ್ಲಿ, 96 ಜಿಲ್ಲೆಗಳ ಕನಿಷ್ಠ 465 ಪೊಲೀಸ್ ಠಾಣೆಗಳು ನಕ್ಸಲ್‌ ಸಂಬಂಧಿತ ಹಿಂಸಾಚಾರವನ್ನು ವರದಿ ಮಾಡಿದ್ದವು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಲಿಖಿತ ಪ್ರಶ್ನೆಗೆ ಉತ್ತರಿಸಿದ ರೈ, ನಕ್ಸಲ್‌ ಹಿಂಸಾಚಾರ ಸಂಬಂಧಿತ ಸಾವಿನ ಸಂಖ್ಯೆ (ಭದ್ರತಾ ಪಡೆಗಳು ಮತ್ತು ನಾಗರಿಕರು) 2010 ರಲ್ಲಿ ಸಾರ್ವಕಾಲಿಕ ಗರಿಷ್ಠ 1005 ರಿಂದ 2022 ರಲ್ಲಿ ಕೇವಲ 98 ಕ್ಕೆ ಕಡಿಮೆಯಾಗಿದೆ ಎಂದು ಹೇಳಿದರು.

ಜಾರ್ಖಂಡ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಬುರ್ಹಾ ಪಹಾರ್, ಪಶ್ಚಿಮ ಸಿಂಗ್‌ಭೂಮ್‌ನ ಟ್ರೈ-ಜಂಕ್ಷನ್, ಸರೈಕೆಲಾ-ಖಾರ್ಸಾವಾನ್ ಮತ್ತು ಖುಂಟಿ ಮತ್ತು ಪರಸ್ನಾಥ್ ಬೆಟ್ಟಗಳಂತಹ ಸ್ಥಳಗಳು ಮಾವೋವಾದಿಗಳಿಂದ ಮುಕ್ತವಾಗಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT