ಬೆಂಗಳೂರು: ‘ ಇಲ್ಲಿಗೆ ಬರುವವರೆಗೂ ನನಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಈಗ ಬ್ಯಾಟ್ ಹಿಡಿಯುವ, ಚೆಂಡನ್ನು ಎಸೆಯುವುದನ್ನು ಕಲಿತಿದ್ದೇನೆ. ನಿಯಮಗಳನ್ನೂ ಅರಿತಿದ್ದೇನೆ. ಆಡುವ ಕಲೆ ಕರಗತ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಶಕ್ಕೆ ಮರಳುವಾಗ ಬಹಳಷ್ಟು ಪಾಠಗಳನ್ನು, ಸುಂದರ ನೆನಪುಗಳನ್ನು ಮತ್ತು ಕ್ರಿಕೆಟ್ ಆಟವನ್ನು ತೆಗೆದುಕೊಂಡು ಹೋಗುತ್ತೇನೆ’–