ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಏಪ್ರಿಲ್ 30ರಂದು ತನ್ನ 100ನೇ ಆವೃತ್ತಿಯನ್ನು ಪೂರ್ಣಗೊಳಿಸಲಿದೆ. ಇದರ ಅಂಗವಾಗಿ ಈ ಕಾರ್ಯಕ್ರಮದ ಪರಿಣಾಮದಿಂದ ಭಾರತದಲ್ಲಿನ ಬದಲಾವಣೆಯನ್ನು ತಿಳಿಸಲು ಆಕಾಶವಾಣಿಯೂ ಬುಧವಾರದಿಂದ ವಿಶೇಷ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಆಲ್ ಇಂಡಿಯಾ ರೇಡಿಯೋ (AIR) ಹೊಂದಿರುವ ಎಲ್ಲಾ ನೆಟ್‌ವರ್ಕ್‌ನಾದ್ಯಂತ ಪ್ರಧಾನಿ ಮಂತ್ರಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಪ್ರತಿಯೊಂದು ಸಂಚಿಕೆಯ ಸಂಬಂಧಿತ ಧ್ವನಿ ತುಣುಕನ್ನು ಬುಲೆಟಿನ್ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಅಭಿಯಾನವು ಮಾರ್ಚ್ 15ರಿಂದ ಪ್ರಾರಂಭಗೊಂಡು ಏಪ್ರಿಲ್ 29ರಂದು 100ನೇ ಸಂಚಿಕೆ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಮುಕ್ತಾಯಗೊಳ್ಳಲಿದೆ.
ಅಕ್ಟೋಬರ್ 3, 2014 ರಂದು ವಿಜಯದಶಮಿಯ ಶುಭ ಸಂದರ್ಭದಲ್ಲಿ ಪ್ರಾರಂಭವಾದ ಪ್ರತಿಷ್ಠಿತ ಕಾರ್ಯಕ್ರಮವು ಇಲ್ಲಿಯವರೆಗೆ ತನ್ನ 98 ಆವೃತ್ತಿಗಳನ್ನು ಪೂರ್ಣಗೊಳಿಸಿದೆ.
ಈ ಅಭಿಯಾನವು ಇಲ್ಲಿಯವರೆಗಿನ 'ಮನ್ ಕಿ ಬಾತ್' ಸಂಚಿಕೆಗಳಲ್ಲಿ ಪ್ರಧಾನಿ ಮೋದಿಯವರು ಹೈಲೈಟ್ ಮಾಡಿದ 100 ಗುರುತಿಸಲಾದ ವಿಷಯ ವಸ್ತುಗಳನ್ನು ಹೊರತರಲಿದೆ.
ದೇಶದ 42 ವಿವಿಧ್ ಭಾರತಿ ಕೇಂದ್ರಗಳು, 25 ಎಫ್.ಎಂ. ರೈನ್ ಬೋ ಚಾನೆಲ್‌ಗಳು, ನಾಲ್ಕು ಎಫ್.ಎಂ. ಗೋಲ್ಡ್ ಚಾನೆಲ್‌ಗಳು ಮತ್ತು 159 ಪ್ರಾಥಮಿಕ ಚಾನೆಲ್‌ಗಳು ಸೇರಿದಂತೆ ವಿವಿಧ ಆಲ್ ಇಂಡಿಯಾ ರೇಡಿಯೋ ಕೇಂದ್ರಗಳು ಈ ಅಭಿಯಾನವನ್ನು ನಡೆಸುತ್ತವೆ.
ನಾಗರಿಕರು 'ನ್ಯೂಸ್ ಆನ್ ಏರ್' ಆಪ್ ಮತ್ತು ಆಲ್ ಇಂಡಿಯಾ ರೇಡಿಯೊದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಕ್ರಮವನ್ನು ಆಲಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.