ನವದೆಹಲಿ: ‘ದೇಶದಾದ್ಯಂತ 27 ನಗರಗಳಲ್ಲಿ 1,058 ಕಿ.ಮೀ ಉದ್ದದ ಮೆಟ್ರೊ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಶುಕ್ರವಾರ ತಿಳಿಸಿದರು.

ದೆಹಲಿ ಮೆಟ್ರೊ ಸೇವೆಯ ಗುಲಾಬಿ ಮಾರ್ಗದಲ್ಲಿರುವ ಮಯೂರ್ ವಿಹಾರ್ ಪಾಕೆಟ್–1 ಮತ್ತು ತ್ರಿಲೋಕಪುರಿ ಸಂಜಯ್ ಲೇಕ್ ನಿಲ್ದಾಣಗಳ ನಡುವಿನ 289 ಮೀಟರ್ ಉದ್ದದ ರೈಲು ಮಾರ್ಗವನ್ನು ಹರದೀಪ್ ಸಿಂಗ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶುಕ್ರವಾರ ಉದ್ಘಾಟಿಸಿದರು.

ಈ ಬಳಿಕ ಮಾತನಾಡಿದ ಅವರು, ‘ದೆಹಲಿ ಮೆಟ್ರೊ ರೈಲು ನಿಗಮವು (ಡಿಎಂಆರ್‌ಸಿ) ನಗರ ಸಂಚಾರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಇದೀಗತ್ರಿಲೋಕಪುರಿ ಸಂಜಯ್ ಲೇಕ್‌ಗೂ ಗುಲಾಬಿ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

‘ಪ್ರಸ್ತುತ, ದೇಶದ 18 ನಗರಗಳಲ್ಲಿ 721 ಕಿ.ಮೀ ಉದ್ದದ ಮೆಟ್ರೊ ರೈಲು ಮಾರ್ಗ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.