ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಿಂದ ಅಮೃತಸರಕ್ಕೆ ಬಂದ 150 ಪ್ರಯಾಣಿಕರಿಗೆ ಕೋವಿಡ್

Last Updated 7 ಜನವರಿ 2022, 16:08 IST
ಅಕ್ಷರ ಗಾತ್ರ

ಅಮೃತಸರ: ಇಟಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಆಗಮಿಸಿರುವ 150 ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ದೃಢಪಟ್ಟಿದೆ.ಒಟ್ಟು 190 ಪ್ರಯಾಣಿಕರು ಇಟಲಿಯ ರೋಮ್‌ನಿಂದನಗರಕ್ಕೆ ಪ್ರಯಾಣ ಬೆಳೆಸಿದ್ದರು. ಸದ್ಯ ಸೋಂಕಿತರನ್ನು ಐಸೊಲೇಷನ್ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಇಟಲಿಯ ಮಿಲಾನ್ ನಗರದಿಂದ ಬಂದ 125 ಪ್ರಯಾಣಿಕರಲ್ಲಿ ಗುರುವಾರ ಸೋಂಕು ಕಾಣಿಸಿಕೊಂಡಿತ್ತು. ಪೋರ್ಚುಗಲ್ ಮೂಲದ ವಿಮಾನಯಾನ ಸಂಸ್ಥೆ ಯೂರೋ ಅಟ್ಲಾಂಟಿಕ್ ಏರ್‌ವೇಸ್‌ನ YU-661 ವಿಮಾನದಲ್ಲಿ ಅವರೆಲ್ಲ ಪ್ರಯಾಣಿಸಿದ್ದರು.

ಇಟಲಿಯನ್ನು 'ಕೋವಿಡ್‌-19 ಅಪಾಯಕಾರಿ ರಾಷ್ಟ್ರ'ವೆಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುತಿಸಿದೆ.

ದೇಶದ ಹತ್ತು ವಿಮಾನ ನಿಲ್ದಾಣಗಳಿಗೆ ಜನವರಿ 6ರಂದು ಆಗಮಿಸಿದ 2,437 ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 140 ಮಂದಿಗೆ ಸೋಂಕು ಖಚಿತವಾಗಿದೆ ಎಂದು ಭಾರತೀಯ ವಿಮಾನಯಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು 7 ದಿನ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT