ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಚಲಿಸುವ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ

Last Updated 8 ಜೂನ್ 2022, 10:17 IST
ಅಕ್ಷರ ಗಾತ್ರ

ಪಟನಾ: ಬಿಹಾರದಲ್ಲಿ ಚಲಿಸುವ ಬಸ್‌ನಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

'ಮಂಗಳವಾರ, ಪಶ್ಚಿಮ ಚಂಪಾರಣ್‌ನಲ್ಲಿರುವ ಬೆತಿಯಾಗೆ ಪ್ರಯಾಣಿಸಲು ಬಾಲಕಿ ಚಂಪಾರಣ್‌ಜಿಲ್ಲೆಯ ಮೋತಿಹಾರಿ ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಈ ವೇಳೆ ಬಸ್‌ ಚಾಲಕ ಬೆತಿಯಾಗೆ ಹೋಗುವುದಾಗಿ ಬಾಲಕಿಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದ. ಬಸ್‌ ಸಂಚರಿಸುವ ವೇಳೆ ಆರೋಪಿಗಳು ಬಾಲಕಿಗೆ ಪ್ರಜ್ಞೆ ತಪ್ಪುವ ಪಾನಿಯ ಕುಡಿಸಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ' ಎಂದು ಪೊಲೀಸರು ವಿವರಿಸಿದ್ದಾರೆ.

'ಎಚ್ಚರಗೊಂಡಾಗ ಬಸ್‌ ಒಳಗೆ ಬಂಧಿಯಾಗಿದ್ದೆ. ಬಾಗಿಲುಗಳನ್ನು ಮುಚ್ಚಲಾಗಿತ್ತು' ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

'ಆರೋಪಿಗಳು ಬಾಲಕಿಯನ್ನು ಬಸ್‌ ಒಳಗೆ ಕೂಡಿ ಹಾಕಿ ಪರಾರಿಯಾಗಿದ್ದಾರೆ. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಜನರು ಬಸ್‌ನ ಬಾಗಿಲನ್ನು ತೆಗೆದು ಬಾಲಕಿಯನ್ನು ರಕ್ಷಿಸಿ, ತಮಗೆ ಮಾಹಿತಿ ನೀಡಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ನ ಚಾಲಕ, ನಿರ್ವಾಹಕ ಮತ್ತು ಸಹಾಯಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT