ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ 177 ಉಗ್ರರ ಹತ್ಯೆ ಮಾಡಲಾಗಿದೆ: ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ  

Last Updated 17 ಸೆಪ್ಟೆಂಬರ್ 2020, 12:08 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿಈ ವರ್ಷ 72 ಉಗ್ರ ನಿಗ್ರಹ ಕಾರ್ಯಾಚರಣೆ ನಡೆದಿದ್ದು ಇದರಲ್ಲಿ 177 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್‌ಭಾಗ್ ಸಿಂಗ್ ಹೇಳಿದ್ದಾರೆ.

ಹತ್ಯೆಗೀಡಾದ ಉಗ್ರರ ಪೈಕಿ 22 ವಿದೇಶಿಯರಾಗಿದ್ದಾರೆ. 2019ರಲ್ಲಿ 72 ಕಾರ್ಯಾಚರಣೆಗಳಲ್ಲಿ 157 ಮತ್ತು 2018ರಲ್ಲಿ 257 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಪಾಕಿಸ್ತಾನವು ಹೊಸ ಉಗ್ರ ಸಂಘಟನೆ ರಚಿಸಿ ಗೊಂದಲವನ್ನುಂಟು ಮಾಡಲು ಯತ್ನಿಸುತ್ತಿದೆ.ಅಲ್- ಬದರ್‌ ಎಂಬ ಸಂಘಟನೆಯನ್ನು ಸಕ್ರಿಯಗೊಳಿಸುವ ಕೆಲಸವನ್ನು ಪಾಕ್ಮಾಡುತ್ತಿದ್ದೆ.ಈ ಬಗ್ಗೆ ನಾವು ಎಚ್ಚೆತ್ತುಕೊಂಡಿದ್ದು, ಪ್ರತಿದಾಳಿಗಿರುವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

ಅದೇ ವೇಳೆ ಉಗ್ರ ಸಂಘಟನೆ ಸೇರಿದ್ದ 20 ಯುವಕರು ಈ ವರ್ಷ ಮರಳಿ ಬಂದಿದ್ದಾರೆ.

2019ರಲ್ಲಿ ಹತ್ಯೆಗೀಡಾದ 157 ಉಗ್ರರಲ್ಲಿ 32 ಮಂದಿ ಪಾಕ್ ಉಗ್ರರಾಗಿದ್ದರು. ಈ ಪೈಕಿ 19 ಉಗ್ರರು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.2019ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.79ರಷ್ಟು ಸ್ಥಳೀಯರಾಗಿದ್ದು ಈ ವರ್ಷ ಹತ್ಯೆಗೀಡಾದವರಲ್ಲಿ ಶೇ.88 ಉಗ್ರರು ಸ್ಥಳೀಯರಾಗಿದ್ದಾರೆ ಎಂದು ಸಿಂಗ್ ಮಾಧ್ಯಮದವರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT