ಭಾನುವಾರ, ಸೆಪ್ಟೆಂಬರ್ 26, 2021
25 °C

ಶಾಲೆಗಾಗಿ ದೇಣಿಗೆ ನೀಡಿದ ಹಾಲು ಉತ್ಪಾದಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೋರಿಗಾಂವ್(ಅಸ್ಸಾಂ): ಹೈಯರ್‌ ಸೆಕೆಂಡರಿ ಶಾಲೆಗಾಗಿ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ 2 ಸಾವಿರ ಮಂದಿ ಸದಸ್ಯರು ತಾವು ಮಾರಾಟ ಮಾಡಿದ ಪ್ರತಿ ಲೀಟರ್‌ ಹಾಲಿಗೆ ಲಭಿಸಿದ ಹಣದಲ್ಲಿ 15 ‍ಪೈಸೆಯನ್ನು ದೇಣಿಗೆಯಾಗಿ ನೀಡಿದ್ದಾರೆ.

ಮೋರಿಗಾಂವ್ ಜಿಲ್ಲೆಯ ಸೀತಾಜಖಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹೀಗೆ ವಿನೂತನ ರೀತಿಯಲ್ಲಿ ಸಂಗ್ರಹಿಸಿದ ₹1ಲಕ್ಷದ ಚೆಕ್‌ ಅನ್ನು ಸೀತಾಜಖಾಲ ಹೈಯರ್‌ ಸೆಕೆಂಡರಿ ಶಾಲೆಯ 11 ಮತ್ತು 12ನೇ ತರಗತಿ ನಡೆಸಲು ದೇಣಿಗೆಯಾಗಿ ನೀಡಿದ್ದಾರೆ.

‘ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರಾಥಮಿಕ ಹಂತದ ಶಾಲೆಯು ಸರ್ಕಾರದ ಅಧೀನದಲ್ಲಿದೆ. ಆದರೆ ಹೈಯರ್ ಸೆಕೆಂಡರಿ ಶಾಲೆಯು ಸರ್ಕಾರದ ಅಧೀನದಲ್ಲಿ ಇಲ್ಲದ ಕಾರಣ ಶಾಲೆ ನಡೆಸಲು ಆರ್ಥಿಕ ಸಮಸ್ಯೆ ಎದುರಾಯಿತು ಈ ಕಾರಣಕ್ಕಾಗಿ ದೇಣಿಗೆ ಸಂಗ್ರಹಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ರಣಜೀಬ್‌ ಶರ್ಮಾ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು