ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌–ಡಿಸೆಂಬರ್‌ ಹೊತ್ತಿಗೆ 216 ಕೋಟಿ ಡೋಸ್‌ ಲಸಿಕೆ ಲಭ್ಯ: ಕೇಂದ್ರ ಸರ್ಕಾರ

Last Updated 14 ಮೇ 2021, 1:27 IST
ಅಕ್ಷರ ಗಾತ್ರ

ನವದೆಹಲಿ: ಆಗಸ್ಟ್‌ ಹಾಗೂ ಡಿಸೆಂಬರ್‌ ನಡುವಿನ ಅವಧಿಯಲ್ಲಿ ಕೋವಿಡ್‌–19 ಲಸಿಕೆಯ 216 ಕೋಟಿ ಡೋಸ್‌ಗಳು ಲಭ್ಯವಾಗಲಿವೆ. ದೇಶದ ಎಲ್ಲರಿಗೂ ಲಸಿಕೆ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆ ‘ಸ್ಪುಟ್ನಿಕ್‌ ವಿ’ ಸಹ ಮುಂದಿನ ವಾರ ಲಭ್ಯವಾಗಲಿದೆ ಎಂದೂ ತಿಳಿಸಿದೆ.

‘ಮುಂದಿನ ವರ್ಷದ ಮೊದಲ ತ್ರೈಮಾಸಿಕ ವೇಳೆಗೆ ದೇಶದಲ್ಲಿ 300 ಕೋಟಿ ಡೋಸ್‌ಗಳಷ್ಟು ಲಸಿಕೆ ಲಭ್ಯವಾಗುವುದು’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆಗಸ್ಟ್‌ನಿಂದ ಡಿಸೆಂಬರ್‌ ವರೆಗಿನ ಅವಧಿಯಲ್ಲಿ ಕೋವಿಶೀಲ್ಡ್‌ ಲಸಿಕೆಯ 75 ಕೋಟಿ ಡೋಸ್‌ ಹಾಗೂ ಕೋವ್ಯಾಕ್ಸಿನ್‌ನ 55 ಕೋಟಿ ಡೋಸ್‌ ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿದೆ’ ಎಂದೂ ಅವರು ಹೇಳಿದರು.

ಕೋವಿಡ್‌–19 ವಿರುದ್ಧದ ಮತ್ತೊಂದು ಲಸಿಕೆಯಾದ ನೋವಾವ್ಯಾಕ್ಸ್‌ನ 30 ಕೋಟಿ ಡೋಸ್‌ಗಳನ್ನು ಬಯಾಲಾಜಿಕಲ್‌–ಇ ಕಂಪನಿ ಉತ್ಪಾದಿಸಲಿದೆ. ಝೈಡಸ್‌–ಕ್ಯಾಡಿಲಾ ಕಂಪನಿ 5 ಕೋಟಿ ಡೋಸ್‌, ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ 20 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT