ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ 25 ಸಾವಿರ ಡೋಸ್‌ ರೆಮ್‌ಡೆಸಿವಿರ್‌

Last Updated 21 ಏಪ್ರಿಲ್ 2021, 20:14 IST
ಅಕ್ಷರ ಗಾತ್ರ

ನವದೆಹಲಿ: ರೆಮ್‌ಡೆಸಿವಿರ್‌ ಔಷಧವನ್ನು 19 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಬುಧವಾರ ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 25,400 ಡೋಸ್‌ಗಳಷ್ಟು ದೊರೆಯಲಿದೆ.

ಮ್ಲ್ಯಾನ್‌ ಕಂಪನಿಯಿಂದ 17,400 ಮತ್ತು ಸಿಪ್ಲಾದಿಂದ 1000, ಸನ್‌ ಕಂಪನಿಯಿಂದ 6000 ಹಾಗೂ ಜ್ಯುಬಿಲಂಟ್‌ನಿಂದ 1000 ಡೋಸ್‌ಗಳಷ್ಟು ರೆಮ್‌ಡೆಸಿವಿರ್‌ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಅವಲಂಬಿಸಿ ಮತ್ತೆ ರೆಮ್‌ಡೆಸಿವಿರ್‌ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. ರೆಮ್‌ಡೆಸಿವಿರ್‌ ಸಮರ್ಪಕ ಪೂರೈಕೆಗೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರಕ್ಕೆ 2.69 ಲಕ್ಷ ಹಾಗೂ ಗುಜರಾತ್‌ಗೆ 1.63 ಲಕ್ಷ, ಉತ್ತರ ಪ್ರದೇಶಕ್ಕೆ 1.22 ಲಕ್ಷ, ಮಧ್ಯಪ್ರದೇಶಕ್ಕೆ 92,400ರಷ್ಟು ಡೋಸ್‌ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT