ಶುಕ್ರವಾರ, ಡಿಸೆಂಬರ್ 2, 2022
20 °C
ಸಾಮಾಜಿಕ ಮಾಧ್ಯಮ ‘ಲೋಕಲ್‌ ಸರ್ಕಲ್ಸ್‌’ ಸಮೀಕ್ಷೆ

ದೆಹಲಿ: ಶೇ 35ರಷ್ಟು ಮನೆಗಳಿಗೆ ಮಾತ್ರ ಕೊಳಾಯಿ ಮೂಲಕ ನೀರು– ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಶೇ 35ರಷ್ಟು ಮನೆಗಳಿಗೆ ಮಾತ್ರ ಆಯಾ ಸ್ಥಳೀಯ ಸಂಸ್ಥೆಗಳು ಕೊಳಾಯಿ ಮೂಲಕ ಗುಣಮಟ್ಟದ ನೀರು ಪೂರೈಕೆ ಮಾಡುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಉಳಿದ ಶೇ 65ರಷ್ಟು ಮನೆಗಳಲ್ಲಿ, ಪೂರೈಕೆಯಾಗುವ ನೀರನ್ನು ಶುದ್ಧೀಕರಿಸಲು ಆಧುನಿಕ ವಿಧಾನಗಳನ್ನು ಬಳಕೆ ಮಾಡಲಾಗುತ್ತದೆ ಎಂದು ‘ಲೋಕಲ್‌ ಸರ್ಕಲ್ಸ್‌’ ಎಂಬ ಸಾಮಾಜಿಕ ಮಾಧ್ಯಮ ವೇದಿಕೆ ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ.

ಪುರಸಭೆ, ನಗರಸಭೆ, ಜಲಮಂಡಳಿ ಅಥವಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಪೂರೈಸುವ ನಲ್ಲಿ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಯಿತು. ಪೂರೈಕೆಯಾಗುತ್ತಿರುವ ನೀರು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂಬುದಾಗಿ ಶೇ 12ರಷ್ಟು ಜನರು ಹೇಳಿದ್ದರೆ, ಶೇ 23ರಷ್ಟು ಜನರ ಉತ್ತಮ, ಶೇ 36ರಷ್ಟು ಮಂದಿ ಸಾಧಾರಣ ಗುಣಮಟ್ಟದ್ದಾಗಿದೆ ಎಂದು ಉತ್ತರಿಸಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.

ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರವು ಪ್ರಮಾಣಿತ ಮಾನದಂಡಗಳನ್ನು ರೂಪಿಸಬೇಕು. ಈ ಮಾನದಂಡಗಳನ್ನು ಎಲ್ಲ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಹಾಗೂ ಇವುಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಮಾಡಬೇಕು ಎಂದು ಸಮೀಕ್ಷಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ದೇಶದ 311 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ 22,000 ಮನೆಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು