ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿ 39 ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Last Updated 1 ಏಪ್ರಿಲ್ 2022, 16:10 IST
ಅಕ್ಷರ ಗಾತ್ರ

ಶ್ರೀನಗರ: ಬಹುತೇಕ ಮಕ್ಕಳೇ ಒಳಗೊಂಡಂತೆ 39 ಜನರು ವಿಷಪೂರಿತ ಆಹಾರ ಸೇವಿಸಿ ಆಸ್ಪತ್ರೆ ಸೇರಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಡಗಾಮ್‌ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಲ್ಲರಿಗೂ ಹೊಟ್ಟೆಗೆ ಸಂಬಂಧಿತ ತೊಂದರೆ ಎದುರಾಗಿತ್ತು. ಬಳಿಕ ಎಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

'ಬಡಗಾಮ್‌ನ ಚರಾರ್-ಎ-ಶರೀಫ್ ಪ್ರದೇಶದ ಜೈಗಿಪೋರಾ ಗ್ರಾಮದಲ್ಲಿ ಅರಿಶಿನವನ್ನು ಸೇರಿಸಿ ಬೇಯಿಸಿದ ಸಾಂಪ್ರದಾಯಿಕ ಅನ್ನವನ್ನು ಸೇವಿಸಿದ ಜನರು ಹೊಟ್ಟೆಯ ಸಮಸ್ಯೆಯಿಂದ ಬಳಲಿದ್ದಾರೆ.

'ಈ ಅಸ್ವಸ್ಥರ ಪೈಕಿ 15 ಮಕ್ಕಳನ್ನು ಶ್ರೀನಗರದ ಜಿಬಿ ಪಂಥ್ ಆಸ್ಪತ್ರೆಗೆ, ಮೂವರನ್ನು ಎಸ್‌ಎಂಎಚ್ಎಸ್ ಆಸ್ಪತ್ರೆಗೆ (ಶ್ರೀನಗರ) ದಾಖಲಿಸಲಾಗಿದೆ. ಉಳಿದವರನ್ನು ಚರಾರ್-ಎ-ಶರೀಫ್ ಪಟ್ಟಣದ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿದೆ' ಎಂದು ಬಡ್ಗಾಮ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ತಜಮುಲ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.

ಸಂತ್ರಸ್ತ ಗ್ರಾಮಕ್ಕೆ ಎದುರಾಗಬಹುದಾದ ಯಾವುದೇ ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT