ಭಾನುವಾರ, ಜೂನ್ 13, 2021
29 °C

ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಿಗೆ ಕೋವಿಡ್ ಸೋಂಕು ದೃಢ

ಪಿಟಿಐ‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಭಾರತ್ ಬಯೋಟೆಕ್‌ನ 50 ಉದ್ಯೋಗಿಗಳಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದು ನೆಟ್ಟಿಗರಲ್ಲಿ ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದ್ದು, ಜೀವ ರಕ್ಷಕ ಲಸಿಕೆಯನ್ನು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 50 ಉದ್ಯೋಗಿಗಳಿಗೆ ಕೊರೊನಾವೈರಸ್ ತಗುಲಿರುವುದನ್ನು ಭಾರತ್ ಬಯೋಟೆಕ್‌ ಸಹ ಸಂಸ್ಥಾಪಕಿ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: 

ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಪೂರೈಕೆ ಬಗ್ಗೆ ರಾಜಕೀಯ ಆರೋಪಗಳಿಗೆ ಉತ್ತರಿಸುತ್ತಾ ಟ್ವೀಟ್ ಮಾಡಿರುವ ಎಲ್ಲಾ, ಕೆಲವು ರಾಜ್ಯಗಳು ನಮ್ಮ ಬದ್ಧತೆ ಹಾಗೂ ಉದ್ದೇಶವನ್ನು ಪ್ರಶ್ನೆ ಮಾಡುತ್ತಿರುವುದು ನೋವಿನ ಸಂಗತಿ. ಕೋವಿಡ್‌ನಿಂದಾಗಿ ನಮ್ಮ ಸಂಸ್ಥೆಯ 50 ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿಲ್ಲ. ಆದರೂ ಈ ಸಾಂಕ್ರಾಮಿಕ ರೋಗದ ಲಾಕ್‌ಡೌನ್ ಸಮಯದಲ್ಲಿ ದಿನದ 24 ತಾಸು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

 

 

 

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳಕೆದಾರರೊಬ್ಬರು, 50 ಉದ್ಯೋಗಿಗಳಿಗೆ ಕೊರೊನಾ ಹೇಗೆ ತಗುಲಿತ್ತು? ಅವರಿಗೆ ಲಸಿಕೆ ಹಾಕಿಸಿಕೊಳ್ಳಲಿಲ್ಲವೇ? ಜೊತೆಗೆ ತಾತ್ಕಾಲಿಕವಾಗಿ ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಏಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

 

 

 

 

ಮಗದೋರ್ವ ಬಳಕೆದಾರ ಭಾರತ್ ಬಯೋಟೆಕ್ ಸೇವೆಯನ್ನು ಮೆಚ್ಚಿದ್ದು, ದೇಶದ ಮೂಲೆ ಮೂಲೆಗೂ ಲಸಿಕೆ ತಲುಪಿಸುವ ನಿಮ್ಮ ಬದ್ಧತೆಗೆ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ: 

 

ನಿಮ್ಮ (ಭಾರತ್ ಬಯೋಟೆಕ್) ಉದ್ಯೋಗಿಗಳೇ ಕೋವಿಡ್‌ನಿಂದ ಬಳಲುತ್ತಿದ್ದಾರೆ ಅಂದರೆ ಇದು ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ತೋರಿಸುತ್ತದೆ ಎಂದು ಮಗದೊಬ್ಬರು ಟೀಕೆ ಮಾಡಿದ್ದಾರೆ.

 

 

 

ಹೈದರಾಬಾದ್ ತಳಹದಿಯ ಭಾರತ್ ಬಯೋಟೆಕ್ ಸಂಸ್ಥೆಯು, 18 ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ವಿತರಿಸುತ್ತಿದೆ. ಇದರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಒಡಿಶಾ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಬಿಹಾರ, ಜಾರ್ಖಂಡ್ ಮತ್ತು ದೆಹಲಿ, ಛತ್ತೀಸಗಢ, ತೆಲಂಗಾಣ, ತ್ರಿಪುರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು