ಶುಕ್ರವಾರ, ಡಿಸೆಂಬರ್ 2, 2022
20 °C

ದೆಹಲಿಯಲ್ಲಿ 6 ವರ್ಷದ ಬಾಲಕನ ಕತ್ತು ಕೊಯ್ದು, ತಲೆ ಒಡೆದು ಕೊಲೆ: ‘ನರಬಲಿ’ ಶಂಕೆ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದಕ್ಷಿಣ ದೆಹಲಿಯ ಲೋಧಿ ಕಾಲೊನಿಯಲ್ಲಿ ಆರು ವರ್ಷದ ಬಾಲಕನ ಕೊಲೆಯಾಗಿದೆ. ಬಾಲಕನ ಕತ್ತು ಕೊಯ್ದು, ತಲೆ ಒಡೆಯುವ ಮೂಲಕ ‘ನರಬಲಿ’ ನೀಡಿರುವ ಶಂಕೆ ವ್ಯಕ್ತವಾಗಿದೆ. 

ಪೊಲೀಸರು ಈ ಸಂಬಂಧ ವಿಜಯ್‌ ಕುಮಾರ್, ಅಮರ್‌ ಕುಮಾರ್‌ ಎಂಬವರೂ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಬಿಹಾರದವರು. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

‘ಆರೋಪಿಗಳು ಮತ್ತು ಬಾಲಕನ ತಂದೆ–ತಾಯಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಒಂದೇ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು. ‘ಅಭಿವೃದ್ಧಿ’ ಹೊಂದಲು ಈ ಕೃತ್ಯ ನಡೆಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಬಾಲಕನ ತಂದೆ ಈ ಬಗ್ಗೆ ದೂರು ನೀಡಿದ್ದಾರೆ. ‘ಭಾನುವಾರ ಕೆಲ ಮಹಿಳೆಯರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭಜನೆ ಹಾಡುತ್ತಿದ್ದರು. ಆಗ ಬಾಲಕ ಅಲ್ಲಿಯೇ ಓಡಾಡಿಕೊಂಡಿದ್ದ. ಕೆಲಹೊತ್ತಿನ ಬಳಿಕ ಎಲ್ಲರೂ ತಮ್ಮ ಮನೆಗೆ ಹೋಗುವ ವೇಳೆ ಬಾಲಕ ನಾಪತ್ತೆಯಾಗಿರುವುದು ಕಂಡುಬಂತು. ಗುಡಿಸಲೊಂದರ ಬಳಿ ರಕ್ತದ ಕಲೆ ಕಂಡುಬಂದಿದ್ದು, ತೆರೆದು ನೋಡಿದಾಗ ಕೃತ್ಯ ಪತ್ತೆಯಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು