ಏ.1ರಿಂದ ಸರ್ಕಾರದ 9 ಲಕ್ಷ ಹಳೆ ವಾಹನಗಳ ಬಳಕೆ ಸ್ಥಗಿತ: ಗಡ್ಕರಿ

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ 15 ವರ್ಷಕ್ಕಿಂತಲೂ ಹಳೆಯದಾದ ಸುಮಾರು 9 ಲಕ್ಷ ವಾಹನಗಳ ಬಳಕೆಯನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುವುದು.
ಸೋಮವಾರ ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ‘ಈ ವಾಹನಗಳ ಬದಲಿಗೆ, ಪರ್ಯಾಯ ಇಂಧನ ಆಧಾರಿತ ನೂತನ ವಾಹನಗಳು ಬಳಕೆಯಾಗಲಿವೆ’ ಎಂದು ತಿಳಿಸಿದರು.
ಪರಿಸರ, ವಾಯು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆಯನ್ನು ಕೈಬಿಡುವುದು ಹಾಗೂ ಪರ್ಯಾಯ ಇಂಧನ ಆಧಾರಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
15 ವರ್ಷಕ್ಕಿಂತಲೂ ಹಳೆಯದಾದ ವಾಹನಗಳ ಬಳಕೆಯನ್ನು ಏಪ್ರಿಲ್ 1ರಿಂದ ಕೈಬಿಡಬೇಕು. ಈ ಆದೇಶವು ರಕ್ಷಣಾ ಇಲಾಖೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿತ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂದು ಭೂಸಾರಿಗೆ ಸಚಿವಾಲಯವು ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.