ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವರ ಜತೆ ಡೇಟಿಂಗ್ ನಡೆಸಿದ್ದ ಶ್ರದ್ಧಾ ಹತ್ಯೆ ಆರೋಪಿ

ದೆಹಲಿ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ವಿವರ
Last Updated 7 ಫೆಬ್ರುವರಿ 2023, 16:56 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಮೂಲದ ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣದ ಆರೋಪಿ, ಆಫ್ತಾಬ್ ಅಮಿನ್ ಪೂನಾವಾಲಾ ಆ್ಯಪ್‌ ಮೂಲಕ ಹಲವು ಮಹಿಳೆಯರೊಂದಿಗೆ ಡೇಟಿಂಗ್ ನಡೆಸುತ್ತಿದ್ದು, ಹತ್ಯೆಯ ಬಳಿಕ ಒಬ್ಬಾಕೆಯನ್ನು ತನ್ನ ಮನೆಗೆ ಕರೆದಿದ್ದ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಶ್ರದ್ಧಾಳ ದೇಹದ ಭಾಗಗಳು ಫ್ರಿಡ್ಜ್‌ನಲ್ಲಿರುವಾಗಲೇ ಮಹಿಳೆಯೊಬ್ಬರನ್ನು ಮನೆಗೆ ಕರೆತಂದಿದ್ದ ಆರೋಪಿ, ಆ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಇತರ ಕಡೆ ಅಡಗಿಸಿಟ್ಟಿದ್ದ ಎಂದೂ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ಇತರ ಮಹಿಳೆಯರೊಂದಿಗೆ ಸಂಬಂಧವಿರುವ ಬಗ್ಗೆ ಆಫ್ತಾಬ್‌ನನ್ನು ಶ್ರದ್ಧಾ ಪ್ರಶ್ನಿಸುತ್ತಿದ್ದಳು. ಇದರಿಂದ ಅವರಿಬ್ಬರ ಸಂಬಂಧ ಹಳಸಿತ್ತು. ಆಕೆಯ ಹತ್ಯೆ ಬಳಿಕ ಆಫ್ತಾಬ್ ‘ಬಂಬಲ್‌’ ಆ್ಯಪ್ ಮೂಲಕ ಹಲವು ಹುಡುಗಿಯರೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಒಮ್ಮೆ ಮನೋರೋಗ ತಜ್ಞೆಯೊಬ್ಬರ ಸಂಪರ್ಕಕ್ಕೆ ಬಂದಿದ್ದ ಆತ, ಆಕೆಯನ್ನು ತನ್ನ ಫ್ಲ್ಯಾಟ್‌ಗೂ ಕರೆತಂದಿದ್ದ ಎಂದು ಹೇಳಲಾಗಿದೆ.

ಈ ಹಿಂದೆ ಆಫ್ತಾಬ್, ‘ಹತ್ಯೆಯ ಬಳಿಕ ಆಕೆಯ ದೇಹದ ಕೆಲ ಭಾಗಗಳನ್ನು ಸುಟ್ಟಿರುವುದಾಗಿ, ಮೂಳೆಗಳನ್ನು ಕಲ್ಲಿನ ಗ್ರೈಂಡರ್‌ನಲ್ಲಿ ಪುಡಿ ಮಾಡಿ ಎಸೆದಿರುವುದಾಗಿ ಹೇಳಿ ಪೊಲೀಸರನ್ನು ದಾರಿತಪ್ಪಿಸಿದ್ದ. ಆಫ್ತಾಬ್‌ನಿಂದ ಹತ್ಯೆಯ ಭೀತಿ ಎದುರಿಸುತ್ತಿದ್ದ ಶ್ರದ್ಧಾ ಆತನೊಂದಿಗೆ ತನ್ನ ಸಂಬಂಧ ಮುರಿದುಕೊಳ್ಳಲು ಬಯಸಿದ್ದಳು. ಆದರೆ, ತನ್ನ ಕುಟಂಬದವರ ಬೆಂಬಲವಿರದ ಕಾರಣ ಹಿಂದೇಟು ಹಾಕಿದ್ದಳು’ ಎಂದೂ 6,629 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT