ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಎಎಪಿ ಪರ್ಯಾಯ ಅಲ್ಲ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

Last Updated 13 ಮಾರ್ಚ್ 2022, 4:52 IST
ಅಕ್ಷರ ಗಾತ್ರ

ಜಮ್ಮು: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಬಿಜೆಪಿಗೆ ಪರ್ಯಾಯ ಪಕ್ಷ ಅಲ್ಲ. ಭವಿಷ್ಯದಲ್ಲಿ ಪಂಜಾಬ್‌ಗೆ ಬಿಜೆಪಿಯೇ ಏಕೈಕ ಆಯ್ಕೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತಂದಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಪಿಎಂ ಮೋದಿ ಅವರ ಹೊಸ ರಾಜಕೀಯ ಸಂಸ್ಕೃತಿಯು 50-60 ವರ್ಷಗಳ ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದ 'ಆಡಳಿತ ವಿರೋಧಿ' ಎಂಬ ಪೀಡೆಯನ್ನು ತೊಡೆದುಹಾಕಿದ್ದಾರೆ. ಜಾತಿ, ಧರ್ಮ, ನಂಬಿಕೆಗಳ ಆಧಾರದಲ್ಲಿ ಚುನಾವಣೆ ಗೆಲ್ಲುವುದು ಸಾಮಾನ್ಯವಾಗಿತ್ತು. ಆದರೆ ಮೋದಿ ಅವರು ಇಂತಹ ವ್ಯವಸ್ಥೆಯನ್ನು ಬದಲಿಸಿದ್ದಾರೆ ಎಂದು ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆದ್ದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ನಾನು ಇಂದೇ ಭವಿಷ್ಯ ನುಡಿಯುತ್ತೇನೆ. ಭವಿಷ್ಯದಲ್ಲಿ ಪಂಜಾಬ್‌ಗೆ ಮತ್ತು ಅಲ್ಲಿನ ಜನರಿಗೆ ಬಿಜೆಪಿಯೇ ಏಕೈಕ ಆಯ್ಕೆಯಾಗಲಿದೆ. ಎಎಪಿ ಬಿಜೆಪಿಗೆ ಪರ್ಯಾಯವಾಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT