ಸೋಮವಾರ, ಮೇ 16, 2022
25 °C

ಪರ್ವತಾರೋಹಣ ತರಬೇತಿ: ಜಿಜಿಐಎಂ ಮತ್ತು ಎನ್‌ಐಎಂ ಒಪ್ಪಂದಕ್ಕೆ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪುಣೆಯ ಗಾರ್ಡಿಯನ್‌ ಗಿರಿ‍ಪ್ರೇಮಿ ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನಿಯರಿಂಗ್‌(ಜಿಜಿಐಎಂ) ಮತ್ತು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ (ಎನ್‌ಐಎಂ) ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಜಿಜಿಐಎಂಯು ಸಾವಿತ್ರಿಬಾಯಿ ಪುಲೆ ಪುಣೆ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ‘ಮೌಂಟೇನಿಯಂರಿಂಗ್‌ ಆ್ಯಂಡ್‌ ಅಲೈಡ್ ಸ್ಪೋರ್ಟ್ಸ್‌ ಡಿಪ್ಲೊಮಾ’ ಕೋರ್ಸ್‌ ಆರಂಭಿಸಿದೆ. ಈ ಕೋರ್ಸ್‌ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹಿಮಾಲಯನ್ ಪರ್ವತ ಏರುವ ತರಬೇತಿ ನೀಡುವ ಕುರಿತಾದ ಒಪ್ಪಂದಕ್ಕೆ ಎನ್‌ಐಎಂ, ಜಿಜಿಐಎಂ ಹಾಗೂ ಸಾವಿತ್ರಿಬಾಯಿ ಪುಲೆ ಪುಣೆ ವಿಶ್ವವಿದ್ಯಾಲಯವು ಸಹಿ ಹಾಕಿದೆ.

ಈ ವೇಳೆ ಎನ್‌ಐಎಂನ ಪ್ರಾಂಶುಪಾಲರಾದ  ಕರ್ನಲ್ ಅಮಿತ್‌ ಬಿಶ್ಟ್‌, ಉಪ ಪ್ರಾಂಶುಪಾಲರಾದ ಯೋಗೇಶ್‌ ದುಮಾಲ್‌, ಜಿಜಿಐಎಂನ ಸ್ಥಾಪಕ ಮತ್ತು ನಿರ್ದೇಶಕರಾದ ಉಮೇಶ್‌ ಜಿರ್ಪೆಉಪಸ್ಥಿತರಿದ್ದರು.

ಮೊಟ್ಟ ಮೊದಲ ಬಾರಿ ಜಿಜಿಐಎಂ ಮತ್ತು ಸಾವಿತ್ರಿ ಬಾಯಿಪುಲೆ ವಿಶ್ವವಿದ್ಯಾಲಯವು ‘ಮೌಂಟೇನಿಯಂರಿಂಗ್‌ ಆ್ಯಂಡ್‌ ಅಲೈಡ್ ಸ್ಪೋರ್ಟ್ಸ್‌ ಡಿಪ್ಲೊಮಾ’ ಕೋರ್ಸ್‌ ಅನ್ನು ಆರಂಭಿಸಿದೆ.

‘ಈ ಕೋರ್ಸ್‌ ಅಡಿಯಲ್ಲಿ ಪರ್ವತಾರೋಹಿ ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಮತ್ತು ಹಿಮಾಲಯದ ಪರ್ವತಾರೋಹಣಕ್ಕಾಗಿ ತರಬೇತಿ ನೀಡಲಾಗುವುದು. ದೇಶದ ಅತ್ಯುತ್ತಮ ಪರ್ವತಾರೋಹಣ ಸಂಸ್ಥೆಗಳಲ್ಲಿ ಎನ್‌ಐಎಂಯು ಒಂದಾಗಿದೆ. ಈ ಒಪ್ಪಂದದಡಿ ವಿದ್ಯಾರ್ಥಿಗಳಿಗೆ ನುರಿತ ತರಬೇತುದಾರರು ಉನ್ನತ ಮಟ್ಟದ ಪರ್ವತಾರೋಹಣ ತರಬೇತಿಯನ್ನು ನೀಡಲಿದ್ದಾರೆ’ ಎಂದು ಜಿರ್ಪೆ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು