ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಶಾಂತಿ ಕಾಪಾಡಲು ಸೇನೆ ಬಲಗೊಳಿಸಬೇಕು: ರಾವತ್‌

Last Updated 10 ನವೆಂಬರ್ 2020, 11:26 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸಶಸ್ತ್ರಪಡೆಗಳು ಅತ್ಯಂತ ಸಂಕೀರ್ಣ ಮತ್ತು ಅನಿಶ್ಚಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಬೇಕಾದರೆ ನಮಗೆ ಬಲವಾದ ಸಶಸ್ತ್ರ ಪಡೆಗಳ ಅಗತ್ಯವಿದೆ‘ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಭಿಪ್ರಾಯಪಟ್ಟರು.

ರಕ್ಷಣಾ ಮತ್ತು ಮಿಲಿಟರಿ ವಿಷಯಗಳ ಕುರಿತಾದ ಪೋರ್ಟಲ್ ‘ಭರತ್‌ಶಕ್ತಿ.ಇನ್‌‘ ಐದನೇ ವಾರ್ಷಿಕ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅದಕ್ಕಾಗಿ ಮಿಲಿಟರಿ ಶಕ್ತಿ ಬಲಗೊಳ್ಳಬೇಕು. ಇಲ್ಲದಿದ್ದರೆ, ನಮ್ಮ ವಿರೋಧಿಗಳು, ಇದರ ಲಾಭವನ್ನು ಪಡೆಯಬಹುದು‘ ಎಂದು ಅವರು ಹೇಳಿದರು.

‘ಪ್ರಪಂಚದ ಪ್ರತಿ ವಲಯದಲ್ಲಿ ಸಣ್ಣದೋ, ದೊಡ್ಡದೋ ಯುದ್ಧಗಳು ನಡೆಯುತ್ತಿರುತ್ತವೆ. ಹಾಗಾಗಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು, ನಮ್ಮ ದೇಶವನ್ನು ರಕ್ಷಿಸಲು, ದೇಶದ ಜನರು, ಸಮಗ್ರತೆಯನ್ನು ಕಾಪಾಡಲು ನಮ್ಮ ಸಶಸ್ತ್ರಪಡೆಯನ್ನು ಬಲವರ್ಧಿಸಬೇಕು‘ ಎಂದು ಅಭಿಪ್ರಾಯಪಟ್ಟರು.

‘ಶಸ್ತ್ರಾಸ್ತ್ರಗಳು ಬೇಕಾಗಿರುವುದು ಯುದ್ಧ ಮಾಡುವುದಕ್ಕಷ್ಟೇ ಅಲ್ಲ. ನಮ್ಮ ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಾಸ್ತ್ರಗಳ ಅಗತ್ಯವಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT