ಸೋಮವಾರ, ಸೆಪ್ಟೆಂಬರ್ 21, 2020
24 °C

ಯುಪಿಎಸ್‌ಸಿ: 13 ವರ್ಷಗಳ ನಂತರ ಯಶಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಹಿಮಾ: ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಾಗಾ ಸಮುದಾಯದ ರಿಚರ್ಡ್ ಯಂಥಾನ್‌ ಎಂ‌ಬುವರು 133 ನೇ ರ‍್ಯಾಂಕ್‌ ಗಳಿಸಿದ್ದಾರೆ.  

ವೋಖಾ ಜಿಲ್ಲೆಯ ಲಖುತಿ ಗ್ರಾಮದ ರಿಚರ್ಡ್ ಹದಿಮೂರು ವರ್ಷಗಳ ನಂತರ ಪರೀಕ್ಷೆ ಬರೆದಿದ್ದಾರೆ. 

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮುಗಿಸಿರುವ ರಿಚರ್ಡ್, ಪ್ರಸ್ತುತ‌ ಹೆಚ್ಚುವರಿ ಸಹಾಯಕ ಆಯುಕ್ತರಾಗಿ (ಇಎಸಿ) ಕಾರ್ಯನಿರ್ವಹಿಸುತ್ತಿದ್ದಾರೆ. ರಿಚರ್ಡ್ ತಾಯಿ ಶಿಲುಮೆನ್ಲಾ ಲಾಂಗ್‌ಚಾರಿ ಅವರು ನಾಗಾಲ್ಯಾಂಡ್ ಸರ್ಕಾರದಲ್ಲಿ ಉಪ ಕಾರ್ಯದರ್ಶಿಯಾಗಿದ್ದಾರೆ.

ರಿಚರ್ಡ್ ಅವರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿ ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೆಫಿಯು ರಿಯೊ ಟ್ವೀಟ್ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು