ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಫೆಲೆರೊ ನಿರ್ಗಮನದ ಬೆನ್ನಲ್ಲೇ ಕಾಂಗ್ರೆಸ್‌ ಸೇರಿದ ಫುರ್ಟಾಡೊ

Last Updated 28 ಸೆಪ್ಟೆಂಬರ್ 2021, 14:40 IST
ಅಕ್ಷರ ಗಾತ್ರ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫೆಲೆರೊ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ತೊರೆದ ಬೆನ್ನಲ್ಲೇ, ಮಾಜಿ ಸಚಿವ ಅವರ್ಟಾಡೊಅವರ್ಟಾನೊ ಫುರ್ಟಾಡೊ ಅವರು ಮಂಗಳವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಗೋವಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗಿರೀಶ್‌ ಚೋಡಾನಕರ್, ವಿರೋಧ ಪಕ್ಷದ ನಾಯಕ ದಿಗಂಬರ್‌ ಕಾಮತ್‌ ಅವರ ಸಮ್ಮುಖದಲ್ಲಿ ಪುರ್ಟಾಡೊ ಅವರು ಕಾಂಗ್ರೆಸ್‌ ಸೇರಿದರು.

ಫೆಲೆರೊ ಅವರು ಟಿಎಂಸಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಫುರ್ಟಾಡೊ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನವೇಲಿಮ್‌ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ.

ಪಕ್ಷೇತರ ಶಾಸಕರಾಗಿದ್ದ ಫುರ್ಟಾಡೊ, ಮನೋಹರ್‌ ಪರ‍್ರೀಕರ್ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸಿದ್ದರಲ್ಲದೇ, 2012–2017ರ ವರೆಗೆ ಮೀನುಗಾರಿಕೆ ಸಚಿವರಾಗಿದ್ದರು. 2017ರ ಚುನಾವಣೆಯಲ್ಲಿ ಅವರು ಫೆಲೆರೊ ವಿರುದ್ಧ ಪರಾಭವಗೊಂಡರು.

‘ನಾನು ಕಾಂಗ್ರೆಸ್‌ ಪಕ್ಷ ಸೇರಿ, ನವೇಲಿಮ್‌ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಇಚ್ಛೆ ಹೊಂದಿದ್ದೆ. ಆದರೆ, ಇದಕ್ಕೆ ಫೆಲೆರೊ ಪ್ರಮುಖ ಅಡ್ಡಿಯಾಗಿದ್ದರು’ ಎಂದು ಫುರ್ಟಾಡೊ ಹೇಳಿದರು.

‘2017ರ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ, ಇನ್ನೆಂದೂ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ. ಆದರೆ, ನನ್ನ ಕ್ಷೇತ್ರದ ಮತದಾರರ ಒತ್ತಾಯದಿಂದಾಗಿ ಈಗ ಸ್ಪರ್ಧಿಸಬೇಕು ಎಂದು ನಿರ್ಧರಿಸಿರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT