ವಿಡಿಯೊ | ರಾಹುಲ್ ನಂತರ ಈಗ ಕಾಂಗ್ರೆಸ್ ಕಾರ್ಯಕರ್ತರ ‘ಪಾರ್ಟಿ’: ಬಿಜೆಪಿ ಟೀಕೆ

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೈಟ್ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೊ ವೈರಲ್ ಆದ ಬಳಿಕ, ಇದೀಗ ಕಾಂಗ್ರೆಸ್ ಕಾರ್ಯಕರ್ತರು ಕ್ಲಬ್‌ವೊಂದರಲ್ಲಿ ಡ್ಯಾನ್ಸ್, ‘ಪಾರ್ಟಿ‘ ಮಾಡುತ್ತಿದ್ದಾರೆ ಎಂದು ಹೇಳಿರುವ ಬಿಜೆಪಿ ವಿಡಿಯೊವನ್ನು ಬಿಡುಗಡೆ ಮಾಡಿದೆ.
ರಾಹುಲ್ ಗಾಂಧಿ ಅವರು ಕಠ್ಮಂಡುವಿನ ನೈಟ್ ಕ್ಲಬ್‌ವೊಂದರಲ್ಲಿ ಯುವತಿಯ ಜೊತೆ ಕಾಣಿಸಿಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ಕುರಿತಾಗಿ ಬಿಜೆಪಿ ರಾಹುಲ್ ಗಾಂಧಿಯನ್ನು ಕಟುವಾಗಿ ಟೀಕೆ ಮಾಡಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಕ್ಲಬ್‌ನಲ್ಲಿ ‘ಪಾರ್ಟಿ‘ ಮಾಡುತ್ತಿದ್ದಾರೆ ಎಂದು ಹೇಳಿರುವ ಬಿಜೆಪಿ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
“Training? Partying? camp” of new office bearers of Maharashtra Pradesh Youth Congress! Watch video & hear the songs!
Rahul in Nepal pub, junior netas in “party training” camp
Jaisa Neta vaise follower
Party पिट चुकी है लेकिन partying यूँही चालेगी!
Partying > party work pic.twitter.com/CxCU8ukNvq
— Shehzad Jai Hind (@Shehzad_Ind) May 12, 2022
ಮಹಾರಾಷ್ಟ್ರ ಬಿಜೆಪಿಯ ಯುವ ಮುಖಂಡ ಶೆಹಜಾದ್ ಪೂನಾವಾಲ ಅವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ಘಟನೆ ನಾಗಪುರದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ನ ಮಹಾರಾಷ್ಟ್ರ ಯುವ ಘಟಕ ಈ ವಿಡಿಯೊವನ್ನು ನೋಡಬೇಕು ಹಾಗೂ ‘ರಾತ್ರಿ ಪಾರ್ಟಿ‘ಯ ಹಾಡನ್ನು ಕೇಳಬೇಕು ಎಂದು ಬರೆದುಕೊಂಡಿದ್ದಾರೆ.
‘ರಾಹುಲ್ ಗಾಂಧಿ ನೇಪಾಳ ಪಬ್‌ನಲ್ಲಿದ್ದರೆ, ಯುವ ಕಾರ್ಯಕರ್ತರು ಕ್ಯಾಂಪ್‌ನಲ್ಲಿ ‘ಪಾರ್ಟಿಯ ತರಬೇತಿ‘ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪರ, ವಿರೋಧದ ಚರ್ಚೆಗಳು ನಡೆಯುತ್ತಿವೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ವಿಫಲವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಚರ್ಚೆ ಮುನ್ನೆಲೆಗೆ ಬಂದಿದೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನೈಟ್ ಕ್ಲಬ್ ವಿಡಿಯೊ ಪ್ರಕಟವಾಗಿದೆ.
READ: ಡಿಕೆಶಿ ಬೆಂಬಲಿಗರ ವಿರುದ್ಧ ರಮ್ಯಾ ಸಿಡುಕು: ‘ಗುಡ್ ಕಾಪಿ ಪೇಸ್ಟ್ ಜಾಬ್‘ ಎಂದ ನಟಿ
ಈ ವಿಡಿಯೊದ ಸತ್ಯಾಸತ್ಯತೆ ಕುರಿತಂತೆ ‘ಇಂಡಿಯಾ ಟುಡೆ‘ ಪರಿಶೀಲನೆ ನಡೆಸುತ್ತಿದೆ. ಇಲ್ಲಿಯವರೆಗೂ ಈ ವಿಡಿಯೊದ ನಿಖರತೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಅದು ವರದಿ ಮಾಡಿದೆ.
ಓದಿ... ಸರ್ಕಾರು ವಾರಿ ಪಾಟ Twitter Review: ಮಹೇಶ್–ಕೀರ್ತಿ ನಟನೆಗೆ ‘ಸೈ’ ಎಂದ ಪ್ರೇಕ್ಷಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.