ಸೋಮವಾರ, ಮೇ 16, 2022
24 °C

ಅಸ್ಸಾಂ ವಿಧಾನಸಭಾ ಚುನಾವಣೆ: ಎಜೆಪಿ ಮತ್ತು ರೈಜೊರ್‌ ದಳ ಮೈತ್ರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಜೈಲಿನಲ್ಲಿರುವ ಸಿಎಎ ವಿರೋಧಿ ಕಾರ್ಯಕರ್ತ ಅಖಿಲ್‌ ಗೊಗೊಯ್ ನೇತೃತ್ವದ ರೈಜೊರ್ ದಳದೊಂದಿಗೆ ಅಸ್ಸಾಂ ಜತೀಯ ಪರಿಷದ್‌(ಎಜೆಪಿ) ಪಕ್ಷವು ಮೈತ್ರಿ ಮಾಡಿಕೊಂಡಿದೆ ಎಂದು ಎಜೆಪಿ ಪಕ್ಷದ ಮುಖ್ಯಸ್ಥ ಲುರಿನ್‌ಜ್ಯೋತಿ ಗೊಗೊಯ್ ಅವರು ಗುರುವಾರ ತಿಳಿಸಿದರು.

ಈ ಸಂಬಂಧ ಗುವಾಹಟಿ ಮೆಡಿಕಲ್‌ ಕಾಲೇಜ್‌ ಮತ್ತು ಹಾಸ್ಪಿಟಲ್‌ನಲ್ಲಿ(ಜಿಎಂಸಿಎಚ್‌) ಲುರಿನ್‌ಜ್ಯೋತಿ ಮತ್ತು ಅಖಿಲ್‌ ಗೊಗೊಯ್‌, ಎರಡೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು. ಅಖಿಲ್‌ ಗೊಗೊಯ್ ಜಿಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವೇಳೆ ಮಾತನಾಡಿದ ಅಖಿಲ್‌, ‘ಎರಡು ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಶೀಘ್ರದಲ್ಲಿ ಮಾಡಲಾಗುವುದು’ ಎಂದರು.

ಕಳೆದ ತಿಂಗಳು ಈ ಬಗ್ಗೆ ರೈಜೊರ್‌ ದಳವು ಲುರಿನ್‌ಜ್ಯೋತಿ ಗೊಗೊಯ್ ಅವರಿಗೆ ಪತ್ರವನ್ನು ಬರೆದಿತ್ತು.

ಇದನ್ನೂ ಓದಿ... ರೈತರ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ: ಪ್ರಧಾನಿ ಮೋದಿ

‘ನಾವು ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಒಗ್ಗಟಾಗಿ ಹೋರಾಡಲು ನಿರ್ಧರಿಸಿದ್ದೇವೆ. ಹಾಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಉಭಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಿದ್ದೇವೆ’ ಎಂದು ಲುರಿನ್‌ಜ್ಯೋತಿ ಅವರು ತಿಳಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿರುವ ಬುಲಂದ್‌ ಪೀಪಲ್ಸ್‌ ಫ್ರಂಟ್(ಬಿಪಿಎಫ್‌) ಪಕ್ಷದ ಜತೆಗೂ ಮೈತ್ರಿ ಬಗ್ಗೆ ಮಾತನಾಡಿದ್ದೇವೆ. ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು