ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಬಲ್ಯ ಕಳೆದುಕೊಂಡಿರುವ ಎಕ್ಯೂಐಎಸ್ ಸಂಘಟನೆ: ಅಮೆರಿಕ

Last Updated 25 ಸೆಪ್ಟೆಂಬರ್ 2020, 13:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌:‘ಜಾಗತಿಕ ನಿಷೇಧಕ್ಕೊಳಗಾಗಿರುವಭಾರತ ಉಪಖಂಡದಅಲ್–ಕೈದಾ (ಎಕ್ಯೂಐಎಸ್) ಉಗ್ರ ಸಂಘಟನೆ ಈಗ ಸಣ್ಣ ಪ್ರಮಾಣದ ಪ್ರಾದೇಶಿಕ ದಾಳಿ ನಡೆಸಲು ಮಾತ್ರವೇ ಸಮರ್ಥವಾಗಿದೆ’ ಎಂದುಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದನೆಯ ಪ್ರಭಾವವನ್ನು ವಿಸ್ತರಿಸಲು 2014 ರಲ್ಲಿ ಈ ಸಂಘಟನೆಯನ್ನು ಅಲ್-ಕೈದಾ ಮುಖ್ಯಸ್ಥ ಅಮಾನ್ ಅಲ್‌ ಜವಾಹ್ರಿ ಪ್ರಾರಂಭಿಸಿದ್ದ.

‘ದಕ್ಷಿಣ ಏಷ್ಯಾದಲ್ಲಿಎಕ್ಯೂಐಎಸ್ ಮುಖಂಡನಾಗಿದ್ದ ಅಸಿಮ್ ಉಮರ್ ಹತ್ಯೆಯ ನಂತರ ಸಂಘಟನೆ ಪ್ರಾಬಲ್ಯ ಗಳಿಸಲು ಹೆಣಗಾಡುತ್ತಿದೆ’ ಎಂದುರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಕ್ರಿಸ್ಟೋಫರ್ ಮಿಲ್ಲರ್ ಅವರು ಸಂಸತ್‌ ಸಮಿತಿಗೆ ಮಾಹಿತಿ ನೀಡಿದ್ದಾರೆ.

‘ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧವು ಪ್ರಾರಂಭವಾಗಿ ಎರಡು ದಶಕ ಕಳೆದಿದ್ದು, ಈ ಸಂದರ್ಭದಲ್ಲಿ ಅಮೆರಿಕ ಎದುರಾಳಿಗಳನ್ನು ಗಮನಾರ್ಹವಾಗಿ ಎದುರಿಸಿದ್ದು, ಅವರ ಪ್ರಾಬಲ್ಯ ತಗ್ಗಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಹೇಳಿದ್ದಾರೆ.

ಆಂತರಿಕ ಭದ್ರತೆ ಮತ್ತು ಆಡಳಿತಾತ್ಮಕ ವ್ಯವಹಾರಗಳ ಸೆನೆಟ್ ಸಮಿತಿಗೆ ‘ಆಂತರಿಕ ಭದ್ರತೆಗೆ ಬೆದರಿಕೆ’ ಸಂಬಂಧಿಸಿದ ವರದಿ ನೀಡಿರುವ ಅಮೆರಿಕದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿ, ‘ಕಳೆದ ಮಾರ್ಚ್‌ ಮಧ್ಯ ಭಾಗದಲ್ಲಿ, ನವಾಯಿ ಅಫ್ಗನ್‌ ಜಿಹಾದ್ ಕುರಿತು ವಿಶೇಷ ಸಂಚಿಕೆ ಹೊರತಂದಿದ್ದ ಆಕಿಸ್‌ ಪತ್ರಿಕೆ, ತಾಲಿಬಾನ್– ಅಮೆರಿಕ ಒಪ್ಪಂದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದರಲ್ಲಿಯೂ, ಅಲ್‌ ಕೈದಾ ನಾಯಕರ ಹೇಳಿಕೆಗಳನ್ನು ಆದ್ಯತೆ ಮೇರೆಗೆ ಪ್ರಕಟಿಸಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT