ಬುಧವಾರ, ಅಕ್ಟೋಬರ್ 5, 2022
27 °C

ತಮಿಳುನಾಡು: ಸಚಿವರ ಬೆಂಗಾವಲು ವಾಹನಕ್ಕಾಗಿ ಆಂಬುಲೆನ್ಸ್ ತಡೆದ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪಯ್ಯಮೋಳಿ ಹಾಗೂ ಅವರ ಬೆಂಗಾವಲು ಪಡೆಯ ವಾಹನ ಸಂಚಾರಕ್ಕಾಗಿ ಆಂಬುಲೆನ್ಸ್‌ ಅನ್ನು ಪೊಲೀಸರು ತುಸು ಹೊತ್ತು ತಡೆದು ನಿಲ್ಲಿಸಿದ ಘಟನೆ ತಮಿಳುನಾಡಿನ ಕುಂಬಕೋಣಂನಲ್ಲಿ ನಡೆದಿದೆ.

ಸೈರನ್‌ ಮೊಳಗಿಸುತ್ತಾ ಬಂದ ಆಂಬುಲೆನ್ಸ್ ಅನ್ನು ಪೊಲೀಸರು ತಡೆದಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸಚಿವ ಅನ್ಬಿಲ್ ಮಹೇಶ್ ಪಯ್ಯಮೋಳಿ ಅವರು ಸಂಚರಿಸುತ್ತಿದ್ದಾರೆ ಎನ್ನಲಾದ ಕಾರು ಹಾದುಹೋಗುವಾಗ ಪೊಲೀಸ್ ಕಾನ್‌ಸ್ಟೇಬಲ್ ಸಲ್ಯೂಟ್ ನೀಡುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ಬೆಂಗಾವಲು ವಾಹನಗಳು ತೆರಳುವ ವರೆಗೂ ಆಂಬುಲೆನ್ಸ್ ಸೇರಿದಂತೆ ಹತ್ತಾರು ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ಆಂಬುಲೆನ್ಸ್ ತಡೆದು ನಿಲ್ಲಿಸಿದ ವಿಚಾರವಾಗಿ ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರತಿಪಕ್ಷ ಎಐಎಡಿಎಂಕೆ ವಾಗ್ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು