ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಎಲ್‌ಜೆಪಿ ನಾಯಕ ಬೆದರಿಕೆಯೊಡ್ಡಿದರು ಎಂದು ಆರೋಪಿಸಿದ ಅಮಿಶಾ

Last Updated 29 ಅಕ್ಟೋಬರ್ 2020, 10:23 IST
ಅಕ್ಷರ ಗಾತ್ರ

ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿ ಡಾ.ಪ್ರಕಾಶ್‌ ಚಂದ್ರ ಪರ ಪ್ರಚಾರದಲ್ಲಿದ್ದಾಗ ಅವರಿಂದ ನಾನು ಬೆದರಿಕೆಮತ್ತು ಅಪಮಾನಕ್ಕೆ ಒಳಗಾಗಿದ್ದೆ ಎಂದು ನಟಿ ಅಮಿಶಾ ಪಟೇಲ್‌ ಹೇಳಿದ್ದಾರೆ.

ಇಂಡಿಯಾ ಟುಡೆ ಟಿವಿ ವಾಹಿನಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಅಮಿಶಾ, ‘ಬಿಹಾರದ ಚುನಾವಣಾ ಪ್ರಚಾರದಲ್ಲಿ ನಾನು ಅಸುರಕ್ಷಿತ ವಾತಾವರಣದಲ್ಲಿದ್ದೆ. ಭಯ ನನ್ನನ್ನು ಕಾಡಿತ್ತು. ಮುಂಬೈ ತಲುಪುವವರೆಗೆ ನಾನು ಇದನ್ನೆಲ್ಲ ಮೌನವಾಗಿ ಸಹಿಸಿಕೊಂಡೆ’ ಎಂದು ಅಮಿಶಾ ಹೇಳಿಕೊಂಡಿದ್ದಾರೆ.

ನಡೆದಿದ್ದೇನು?

‘ನನ್ನನ್ನು ಕೇವಲ ಎರಡು ಗಂಟೆಗಳ ಕಾಲ ನಡೆಯಲಿರುವ ರ‍್ಯಾಲಿಗಾಗಿ ಕರೆಸಿಕೊಳ್ಳಲಾಗಿತ್ತು. ಅದಕ್ಕಾಗಿ ಪಾಟ್ನಾದಿಂದ ಎರಡು ಗಂಟೆಗಳ ಕಾಲ ದೂರ ಪ್ರಯಾಣಿಸಬೇಕಿತ್ತು ಎಂದು ಹೇಳಿದ್ದರು. ಆದರೆ ಆ ಜಾಗ ಪಾಟ್ನಾದಿಂದ ಮೂರು ಕಿಲೋಮೀಟರ್‌ ದೂರದಲ್ಲಿತ್ತು. ನನಗೆ ಸಂಜೆಯ ವಿಮಾನದಲ್ಲಿ ವಾಪಸಾಗಲೇಬೇಕಿತ್ತು. ಆದರೆ ಇಲ್ಲಿನ ವಿದ್ಯಮಾನಗಳಿಂದ ನನಗೆ ತೊಂದರೆ ಆಯಿತು’ ಎಂದು ಹೇಳಿಕೊಂಡಿದ್ದಾರೆ.

‘ನನ್ನ ಕಾರಿನಸುತ್ತ ಅವರ (ಪ್ರಕಾಶ್‌ ಚಂದ್ರ ಬೆಂಬಲಿಗರು) ಬೆಂಗಾವಲಿನ ರೀತಿ ಇರುತ್ತಿದ್ದರು. ನೀವು ಇಲ್ಲಿರಬೇಕಾಗಿಲ್ಲ ಎಂದು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಅವರು ಹೇಳಿದಂತೆ ಮಾಡಲೇಬೇಕಿತ್ತು. ಅಲ್ಲಿಯವರೆಗೆ ಅವರು ಕದಲುತ್ತಿರಲಿಲ್ಲ. ಅಲ್ಲಿ ನನ್ನನ್ನು ಅತ್ಯಾಚಾರ ಮಾಡಿ ಕೊಲ್ಲುವ ಸಾಧ್ಯತೆಯೂ ಇತ್ತುʼ ಎಂದು ಸಂದರ್ಶನದಲ್ಲಿ ತೀವ್ರ ಕಳವಳಕಾರಿಯಾಗಿ ಹೇಳಿಕೊಂಡಿದ್ದಾರೆ.

‘ಮುುಂಬೈ ಸೇರಿದ ಬಳಿಕವೂ ಅವರಿಂದ ಬೆದರಿಕೆಕರೆ ಹಾಗೂ ಸಂದೇಶಗಳು ಬರುತ್ತಿದ್ದವು. ನಾನು ಪ್ರಾಮಾಣಿಕಳಾಗಿದ್ದೇನೆ. ಆದ್ದರಿಂದ ಈ ಘಟನೆಯನ್ನು ಹೇಳಿಕೊಳ್ಳಲು ಯಾವ ಹಿಂಜರಿಕೆಯೂ ಇಲ್ಲ’ ಎಂದು ಹೇಳಿದ್ದಾರೆ.

‘ನಾನು ಅಕ್ಷರಶಃ ಅಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಒಂದು ರೀತಿ ಜೀವವೂ ಅಪಾಯದಲ್ಲಿತ್ತು. ಮುಂಬೈ ಸೇರಿದ ಬಳಿಕ ಸತ್ಯವನ್ನು ಜಗತ್ತಿಗೆ ತಿಳಿಸಬೇಕೆನಿಸಿತು ಎಂದೆನಿಸಿತು’ ಎಂದಿದ್ದಾರೆ.

ಆದರೆ ಅಮಿಶಾ ಮಾಡಿರುವ ಎಲ್ಲ ಆರೋಪಗಳನ್ನು ಪ್ರಕಾಶ್‌ಚಂದ್ರ ನಿರಾಕರಿಸಿದ್ದಾರೆ. ‘ನಮ್ಮಲ್ಲೇನು ನಟಿಯರಿಲ್ಲವೇ? ನನ್ನ ಬಂಧುವೊಬ್ಬರು ಓಬ್ರಾದಲ್ಲಿ ಆಯೋಜಿಸಿದ್ದ ರ‍್ಯಾಲಿಗಾಗಿ ಅಮಿಶಾ ಅವರನ್ನು ಕರೆಸಲಾಗಿತ್ತು. ಅಂಥ ಘಟನೆಗಳು ನಡೆದೇ ಇಲ್ಲ. ಅಮಿಶಾ ಅವರ ಭದ್ರತಾ ವ್ಯವಸ್ಥೆ ಪ್ರತಿಯೊಂದು ಮಾಹಿತಿಯೂ ದೌಡ್‌ನಗರ ಪೊಲೀಸರ ಬಳಿ ಇದೆ. ಜನರಿಂದ ಮತ ಪಡೆದು ಗೆಲ್ಲುತ್ತೇನೆಯೇ ವಿನಃ ಇಂಥ ನಟಿಯರ ಪ್ರಚಾರದಿಂದ ಅಲ್ಲ. ಅಮಿಶಾ ಅವರು ಹಾಲಿ ಅಧಿಕಾರದಲ್ಲಿರುವ ಪಪ್ಪು ಯಾದವ್‌ ಜತೆ ನನ್ನ ಬಗೆಗೆ ಸುಳ್ಳು ಹೇಳಿಕೆ ನೀಡಲು ₹ 15 ಲಕ್ಷ ಪಡೆದು ಒಪ್ಪಂದ ಮಾಡಿಕೊಂಡಿದ್ದಾರೆ.ಹೀಗಾಗಿ ಇಂಥ ಆರೋಪಗಳು ಕೇಳಿ ಬಂದಿವೆ ಎಂದಿದ್ದಾರೆ.

ಸಂಭಾಷಣೆ ಕೇಳಲು ವಿಡಿಯೋ ಲಿಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT