ಶನಿವಾರ, ಜನವರಿ 16, 2021
28 °C

ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ: ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Amit Shah

ಕೋಲ್ಕತ್ತ: ರಾಜಕೀಯ ಹಿಂಸೆ, ಭ್ರಷ್ಟಾಚಾರ, ಸುಲಿಗೆ ಮತ್ತು ಬಾಂಗ್ಲಾದೇಶೀಯರ ಒಳ ನುಸುಳುವಿಕೆ ತೊಡೆದುಹಾಕಲು ಪಶ್ಚಿಮ ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಬೋಲ್‌ಪುರದಲ್ಲಿ ರೋಡ್‌ ಶೋದಲ್ಲಿ ಮಾತನಾಡಿದ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಂಗಾಳದ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿ ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಪಟ್ಟಣವಿದು. ಹಿಂದೆ ‘ಸೋನರ್ ಬಾಂಗ್ಲಾ (ಬೆಂಗಾಲ್ ಆಫ್‌ ಗೋಲ್ಡ್)’ ಎಂದು ಕರೆಯುತ್ತಿದ್ದ ಇಲ್ಲಿನ ವೈಭವವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮರಳಿ ರೂಪಿಸಲಿದೆ ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ: 

‘ನನ್ನ ಜೀವನದಲ್ಲಿ ನಾನು ಹಲವಾರು ರೋಡ್ ಶೋಗಳಿಗೆ ಹಾಜರಾಗಿದ್ದೇನೆ ಮತ್ತು ಆಯೋಜಿಸಿದ್ದೇನೆ ಆದರೆ ಈ ರೀತಿಯದ್ದನ್ನು ನೋಡಿಲ್ಲ. ಈ ರೋಡ್‌ ಶೋ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಜನರ ಆಕ್ರೋಶದ ಪ್ರತಿಫಲನವಾಗಿದೆ. ಇಲ್ಲಿ ಸೇರಿರುವ ಜನಸ್ತೋಮವು ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾದ ಮೇಲೆ ಜನರ ನಂಬಿಕೆಯನ್ನು ತೋರಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು