ಬುಧವಾರ, ಅಕ್ಟೋಬರ್ 21, 2020
22 °C

₹2,290 ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ₹780 ಕೋಟಿ ಮೌಲ್ಯದ ಅಮೆರಿಕದ ಸಿಗ್ ಸೌರ್ ಬಂದೂಕುಗಳು ಸೇರಿದಂತೆ ಒಟ್ಟು ₹2,290 ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಒಪ್ಪಿಗೆ ನೀಡಿದೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಸಲಕರಣೆ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ನೌಕಾಪಡೆ ಹಾಗೂ ವಾಯುಪಡೆಯ ಬಳಕೆಗೆ ₹970 ಕೋಟಿ ಮೊತ್ತದ ಆ್ಯಂಟಿ ಏರ್‌ಫೀಲ್ಡ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಸೇನೆ ಮತ್ತು ಐಎಎಫ್‌ ನಡುವೆ ಸೀಮಾತೀತ ಸಂವಹನಕ್ಕೆ ನೆರವಾಗುವ ₹540 ಕೋಟಿ ಮೌಲ್ಯದ ಹೈಫ್ರೀಕ್ವೆನ್ಸಿ ಟ್ರಾನ್ಸ್ ರಿಸೀವರ್‌ಗಳ ಖರೀದಿಗೂ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು