ಶನಿವಾರ, ಜನವರಿ 16, 2021
17 °C

ಲಡಾಖ್‌ಗೆ ಬರಲಿವೆ ವೇಗದ 12 ಗಸ್ತು ದೋಣಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಸೇನೆಯು 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಗೋವಾ ಶಿಪ್‌ಯಾರ್ಡ್‌ನೊಂದಿಗೆ ಶುಕ್ರವಾರ ಒಪ್ಪಂದ ಮಾಡಿಕೊಂಡಿದೆ. ಲಡಾಖ್‌ ಸಮೀಪದ ಪಂಗೊಂಗ್ ತ್ಸೋ ಸರೋವರದಲ್ಲಿ ಕಣ್ಗಾವಲು ಸುಧಾರಿಸಲು ಗಸ್ತು ದೋಣಿಗಳು ಬಳಕೆಯಾಗಲಿವೆ.

ಮೇ 2021ರ ವೇಳೆಗೆ ಸುಧಾರಿತ ದೋಣಿಗಳು ಎತ್ತರದ ಪ್ರದೇಶದಲ್ಲಿ ನಿಯೋಜನೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದರೆ, ಮುಂದಿನ ಬೇಸಿಗೆಯ ಆರಂಭದಲ್ಲಿ ಹಿಮ ಕರಗಿದಾಗ ಮತ್ತು ಭಾರತೀಯ ಸೈನ್ಯ ಮತ್ತು ಚೀನೀ ಪಡೆಗಳು ತಮ್ಮ ಗಸ್ತು ಚಟುವಟಿಕೆಗಳನ್ನು ಪುನರಾರಂಭಿಸುವ ಹೊತ್ತಿಗೆ ದೋಣಿಗಳು ಸೈನಿಕರಿಗೆ ಲಭ್ಯವಿರುತ್ತವೆ.

ಕಳೆದ ಕೆಲವು ವರ್ಷಗಳಿಂದ, ಚೀನಾ ಕಡೆಯವರು ವೇಗವಾಗಿ ಚಲಿಸುವ ಹೊಸ ಕಣ್ಗಾವಲು ದೋಣಿಗಳನ್ನು ನಿಯೋಜನೆಗಳಿಸಿ, ಹೊಸ ದೋಣಿ ಮನೆಗಳನ್ನೂ ನಿರ್ಮಿಸಿದ್ದಾರೆ. ಭಾರತೀಯ ಸೇನೆಯೂ ವಿಚಕ್ಷಣಾ ದೋಣಿಗಳನ್ನು ಹೊಂದಿದೆ. ವಿವಾದಿತ ಜಾಗದಲ್ಲಿ ಎರಡೂ ಕಡೆಯ ಸುಮಾರು 50 ಸಾವಿರ ಸೈನಿಕರು ಬೀಡುಬಿಟ್ಟಿದ್ದಾರೆ. ಕಳೆದ ವರ್ಷದ ಬೇಸಿಗೆ ಗಸ್ತು ಸಮಯದಲ್ಲಿ, ಚೀನಾ ಸೇನೆಯು ಅನೇಕ ಸ್ಥಳಗಳಲ್ಲಿ ಎಲ್‌ಎಸಿ ಅತಿಕ್ರಮಣ ಮತ್ತು ಉಲ್ಲಂಘನೆ ಮಾಡಿರುವುದನ್ನು ಭಾರತೀಯ ಸೇನೆ ಪತ್ತೆಹಚ್ಚಿತ್ತು. ಇದು 1962ರ ಯುದ್ಧದ ನಂತರದ ಬಿಕ್ಕಟ್ಟಾಗಿ ಪರಿಣಮಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು