ಭಾನುವಾರ, ಜನವರಿ 16, 2022
28 °C

ಮಥುರಾ: ಅತ್ಯಾಚಾರ ಆರೋಪದಡಿ ಸೇನಾ ಸಿಬ್ಬಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಥುರಾ: 21 ವರ್ಷದ ಮಹಿಳೆಗೆ ಡ್ರಗ್ಸ್‌ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಸೇನಾ ಸಿಬ್ಬಂದಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. 

'ಸಂತ್ರಸ್ತೆ ಮತ್ತು ಆರೋಪಿ ತೇಜ್‌ವೀರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು.  ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ’ ಎಂದು ಅವರು ಹೇಳಿದರು. 

‘ಅವರಿಬ್ಬರು ನನಗೆ ಡ್ರಗ್ಸ್‌ ನೀಡಿದರು. ಬಳಿಕ ತೇಜ್‌ವೀರ್‌ ತನ್ನ ಮೇಲೆ ಅತ್ಯಾಚಾರವೆಸಗಿದರೆ, ದಿಗಂಬರ್‌ ಲೈಂಗಿಕ ಕಿರುಕುಳ ನೀಡಿದ. ನಂತರ ಅವರು ನನ್ನನ್ನು ಕೊಸಿ ಕಲಾನ್‌ ಪ್ರದೇಶದಲ್ಲಿ ಬಿಟ್ಟು ಹೋದರು’ ಎಂದು ಸಂತ್ರಸ್ತೆ ತಿಳಿಸಿದ್ದಾರೆ. 

‘ದಿಗಂಬರ್‌ನನ್ನು ಕೊಟಾಬನ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಬ್ಬರು ಆರೋಪಿಗಳು ಹರಿಯಾಣದ ಪಲ್ವಾಲ್‌ನ ಮನ್ಪುರ ಗ್ರಾಮದ ನಿವಾಸಿಗಳು’ ಎಂದು ಅಧಿಕಾರಿಗಳು ಅವರು ಮಾಹಿತಿ ನೀಡಿದರು. 

ಮಹಿಳೆಯ ಅತ್ಯಾಚಾರ, ಹತ್ಯೆ: (ಮುಂಬೈ ವರದಿ) 20 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದರು. 

‘ಖಾಲಿಯಿದ್ದ 13 ಅಂತಸ್ತಿನ ವಸತಿ ಕಟ್ಟಡದ ತಾರಸಿಯಲ್ಲಿ ಮಹಿಳೆಯ ಕೊಳೆತ ಶವ ಗುರುವಾರ ಸಂಜೆ ಪತ್ತೆಯಾಗಿದೆ. ಕೆಲ ಯುವಕರು ವಿಡಿಯೊ ಶೂಟ್‌ ಮಾಡಲೆಂದು ತಾರಸಿಗೆ ಹೋಗಿದ್ದರು. ಈ ವೇಳೆ ಅವರಿಗೆ ಶವ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ವಿನೋಬಾ ಭಾವೆ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಅವರು ಹೇಳಿದರು. 

‘ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆಯ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು