ಸೋಮವಾರ, ಜೂನ್ 27, 2022
21 °C

ಕೋವಿಡ್‌: ದೆಹಲಿಯಲ್ಲಿ ಹೊಸದಾಗಿ 400 ಪ್ರಕರಣಗಳು ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಹೊಸದಾಗಿ 400 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಆದರೆ, ಕೋವಿಡ್‌ ದೃಢ ಪ್ರಮಾಣ ಶೇ 0.5ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದರು.

ಇನ್ನೂ ಒಂದು ವಾರದ ಅವಧಿಗೆ ಕೋವಿಡ್‌–19 ಪ್ರಕರಣಗಳು ನಿಯಂತ್ರಣದಲ್ಲಿರುವುದು ಕಂಡುಬಂದರೆ, ನಿರ್ಬಂಧಗಳನ್ನು ಮತ್ತಷ್ಟೂ ಸಡಿಲಿಸಲಾಗುವುದು ಎಂದೂ ಅವರು ಹೇಳಿದರು.

ಶುಕ್ರವಾರ ಕೋವಿಡ್‌ನ 523 ಹೊಸ ಪ್ರಕರಣಗಳು ವರದಿಯಾಗಿದ್ದವಲ್ಲದೇ, 50 ಜನರು ಮೃತಪಟ್ಟಿದ್ದರು. ಕೋವಿಡ್‌ ದೃಢ ಪ್ರಮಾಣ ಶೇ 0.68ರಷ್ಟಿತ್ತು ಎಂದು ಅರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌ ಕೊನೆಯ ವಾರದಲ್ಲಿ ಕೋವಿಡ್‌ ದೃಢಪ್ರಮಾಣ ಶೇ 36ರಷ್ಟು ಇದ್ದದ್ದು ಈಗ ಶೇ 1ಕ್ಕಿಂತ ಕಡಿಮೆ ಇದೆ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು