ಶನಿವಾರ, ಜುಲೈ 24, 2021
26 °C

ಅರುಣಾಚಲ ಪ್ರದೇಶ: ಗಡಿಯಲ್ಲಿ 12 ನೂತನ ರಸ್ತೆಗಳು ಬಳಕೆಗೆ ಮುಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಿಮಿನ್‌, ಅರುಣಾಚಲ ಪ್ರದೇಶ: ‘ಭಾರತ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತದೆ. ಆದರೆ, ದಾಳಿ ನಡೆದಲ್ಲಿ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಲು ಸಜ್ಜಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದರು.

12 ನೂತನ ರಸ್ತೆಗಳನ್ನು ಬಳಕೆಗೆ ಮುಕ್ತಗೊಳಿಸಿದ ಅವರು, ಗಡಿ ಭಾಗದಲ್ಲಿ ಶಾಂತಿಗೆ ಭಂಗ ಉಂಟುಮಾಡುವ ಯಾವುದೇ ಶಕ್ತಿಗಳು ಅದರ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

ನೂತನ ರಸ್ತೆಗಳು ಸಂಪರ್ಕ ವ್ಯವಸ್ಥೆ ಉತ್ತಮಪಡಿಸುವ ಜೊತೆಗೆ ಅಂತರರಾಷ್ಟ್ರೀಯ ಗಡಿಯಲ್ಲಿ ಸೇನೆಯ ತುಕಡಿಗಳು ತ್ವರಿತಗತಿಯಲ್ಲಿ ಕ್ರಮಿಸಲು ಸಹಾಯಕವಾಗಿವೆ ಎಂದರು. ವಿಶ್ವದರ್ಜೆ ಗುಣಮಟ್ಟದ ರಸ್ತೆಗಳನ್ನು ಗಡಿ ರಸ್ತೆ ಅಭಿವೃದ್ಧಿ ಸಂಸ್ಥೆಯು ನಿರ್ಮಾಣ ಮಾಡಿದೆ ಎಂದು ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು