ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಗ್ಸ್‌ ಪ್ರಕರಣ: 22 ದಿನಗಳ ಬಳಿಕ ಜೈಲಿನಿಂದ ಆರ್ಯನ್‌ ಖಾನ್‌ ಬಿಡುಗಡೆ

Last Updated 30 ಅಕ್ಟೋಬರ್ 2021, 6:57 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಮಗ, ಐಷಾರಾಮಿ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ 22 ದಿನಗಳ ನಂತರ ಇಲ್ಲಿನ ಆರ್ಥರ್‌ ರೋಡ್‌ ಜೈಲಿನಿಂದ ಬಿಡುಗಡೆಯಾದರು.

ಸೆಷನ್ಸ್‌ ನ್ಯಾಯಾಲಯವು ಬಿಡುಗಡೆ ಮೆಮೊ ನೀಡಿದ ಒಂದು ದಿನದ ನಂತರ, ಅಂದರೆ ಶನಿವಾರ 11 ಗಂಟೆ ಸುಮಾರಿಗೆ ಆರ್ಯನ್‌ ಜೈಲಿನಿಂದ ಹೊರಬಂದರು. ಅಲ್ಲಿಂದ ಕಾರಿನ ಮೂಲಕ ಅವರು ಬಾಂದ್ರಾದಲ್ಲಿರುವ ತಮ್ಮ ಮನೆಗೆ ಸಾಗಿದರು.

ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಹಿಡಿದಿದ್ದರಿಂದ ಬಿಡುಗಡೆ ವಿಳಂಬವಾಯಿತು. ಶಾರುಕ್‌ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್‌ ಜಾಮೀನಿಗೆ ಭದ್ರತೆ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT