ಶನಿವಾರ, ಮೇ 21, 2022
25 °C

ಬಾಬರಿ ಮಸೀದಿ ಧ್ವಂಸ– ಬಿಜೆಪಿಗೆ ಶಿವಸೇನೆಯ ಸಂಜಯ್‌ ರಾವುತ್‌ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಬರಿ ಮಸೀದಿ ಧ್ವಂಸದ ವೇಳೆ ಶಿವಸೇನಾ ನಾಯಕರೂ ಯಾರೂ ಇರಲಿಲ್ಲ ಎಂಬ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಹೇಳಿಕೆಗೆ ಶಿವಸೇನಾ ಸಂಸದ ಸಂಜಯ್‌ ರಾವುತ್‌ ಸೋಮವಾರ ತಿರುಗೇಟು ನೀಡಿದ್ದಾರೆ. 

ರಾಮ ಜನ್ಮಭೂಮಿ ಚಳವಳಿಯಲ್ಲಿ ಶಿವಸೇನಾ ವಹಿಸಿರುವ ಪಾತ್ರದ ಬಗ್ಗೆ ಬಿಜೆಪಿ ತನ್ನ ನಾಯಕರನ್ನೇ ಕೇಳಬೇಕು ಎಂದು ರಾವುತ್‌ ಕುಟುಕಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಚೀನಾ ಆಕ್ರಮಣದಂತಹ ಗಂಭೀರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಹನುಮಾನ್‌ ಚಾಲೀಸಾ ಪಠಣ ಮತ್ತು ಅಯೋಧ್ಯೆ ವಿವಾದಗಳನ್ನು ಕೆದಕಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. 

‘ಬಾಬರಿ ಮಸೀದಿ ಧ್ವಂಸಗೊಂಡಾಗ ಶಿವಸೇನಾ ಸದಸ್ಯರು ಎಲ್ಲಿದ್ದರು ಎಂದು ಕೇಳುವ ಬಿಜೆಪಿಯು ತಮ್ಮ ದಿವಂಗತ ನಾಯಕ ಸುಂದರ್‌ ಸಿಂಗ್‌ ಭಂಡಾರಿ ಅವರನ್ನು ಕೇಳಿದ್ದರೆ ತಿಳಿಯುತ್ತಿತ್ತು. ಆ ಸಮಯದ ಸಿಬಿಐ ಮತ್ತು ಕೇಂದ್ರ ವಾರ್ತಾ ಶಾಖೆಯ ವರದಿಯನ್ನೂ ಪರಿಶೀಲಿಸಲಿ’ ಎಂದು ರಾವುತ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಪರಿಸ್ಥಿತಿ ಬದಲಾಗಿದ್ದು ಸಮಸ್ಯೆಗಳೂ ಬದಲಾಗಿವೆ. ಜನರು ಈಗ ಅವುಗಳ ಬಗ್ಗೆ ಗಮನ ಕೊಡುವುದಿಲ್ಲ. ಆದರೆ ಸಮಸ್ಯೆಗಳನ್ನು ಕೆದಕಲಾಗುತ್ತಿದೆ’ ಎಂದು ಹೇಳಿದರು. 

ಫಡಣವೀಸ್‌ ಭಾನುವಾರ ಶಿವಸೇನಾದ ಹಿಂದುತ್ವದ ವಿಚಾರವಾಗಿ ಟೀಕಿಸುತ್ತಾ, ಬಾಬರಿ ಮಸೀದಿ ಧ್ವಂಸದ ವೇಳೆ  ಶಿವಸೇನಾದ ಯಾವ ನಾಯಕರೂ ಅಲ್ಲಿರಲಿಲ್ಲ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು