ಅಸ್ಸಾಂನ ಬರಾಕ್ ನದಿ ಕಣಿವೆಯಲ್ಲಿ ಮತ್ತೊಂದು ಅಭಯಾರಣ್ಯ: ವಿವಿಧ ಬಗೆಯ ಮಂಗಗಳ ತಾಣ

ಸಿಲ್ಚಾರ್: ಅಸ್ಸಾಂನ ಪ್ರಮುಖ ಹಾಗೂ ಎರಡನೇ ಅತಿ ದೊಡ್ಡ ನದಿಯಾಗಿರುವ ಬರಾಕ್ ನದಿ ಕಣಿವೆ ಪ್ರದೇಶದಲ್ಲಿ ಮತ್ತೊಂದು ವನ್ಯಜೀವಿ ಅಭಯಾರಣ್ಯ ಶೀಘ್ರದಲ್ಲೇ ಘೋಷಣೆಯಾಗಲಿದೆ.
ಬರಾಕ್ ನದಿ ಕಣಿವೆಯ ‘ಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯ’ದ ರಚನೆಯ ಪ್ರಸ್ತಾವನೆಗೆ ಅಸ್ಸಾಂ ರಾಜ್ಯಪಾಲರಾದ ಜಗದೀಶ್ ಮುಖಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ.
ನೂರಾರು ಬಗೆ ಜಾತಿಯ ಪ್ರಾಣಿ–ಪಕ್ಷಿಗಳನ್ನು ಹಾಗೂ ಅಪರೂಪದ ವನ್ಯಜೀವಿಗಳನ್ನು ಬರಾಕ್ ಭುಬನ್ ಕಾಡು ಹೊಂದಿದೆ. ಉದ್ದೇಶಿತ ಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯ 320 ಚದರ ಕಿಮೀ ಇದ್ದು, ಕಾಳಿಂಗ ಸರ್ಪದ ನೈಸರ್ಗಿಕ ತಾಣ ಕೂಡ ಆಗಿದೆ.
ಅಸ್ಸಾಂನ ಈ ಬರಾಕ್ ನದಿ ಕಣಿವೆ ಪ್ರದೇಶದಲ್ಲಿ ಭಾರತದಲ್ಲಿ ಅಪರೂಪ ಎನ್ನಲಾದ ವಿವಿಧ ಜಾತಿಯ ಚಿತ್ರ–ವಿಚಿತ್ರ ಮಂಗಗಳು, ಕಾಡುಪಾಪಗಳು ವಾಸಿಸುತ್ತವೆ.
ಸಿಲ್ಚಾರ್ ಕ್ಷೇತ್ರದ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರು ಈ ಪ್ರದೇಶದಲ್ಲಿ ಮತ್ತೊಂದು ಅಭಯಾರಣ್ಯ ಘೋಷಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಳೆದ ಒಂದು ವರ್ಷದಿಂದ ಅಸ್ಸಾಂ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಈ ಕುರಿತು ಮಾತನಾಡಿರುವ ರಾಯ್ ಅವರು, ಅಸ್ಸಾಂ ಸರ್ಕಾರ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದೆ. ಮುಂಬರುವ ಐದಾರು ತಿಂಗಳುಗಳಲ್ಲಿ ಕೇಂದ್ರ ಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯವನ್ನು ಘೋಷಣೆ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಇದರಿಂದ ಅಭಯಾರಣ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂದು ಹೇಳಿದ್ದಾರೆ.
RRR ಬಗ್ಗೆ ಬ್ರಿಟಿಷ್ ಇತಿಹಾಸ ಪ್ರಾಧ್ಯಾಪಕ ಆಡಿದ ಆ ಮಾತಿಗೆ ಕೆಂಡವಾದ ಭಾರತೀಯರು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.