ಗುರುವಾರ , ಡಿಸೆಂಬರ್ 3, 2020
23 °C

ದೆಹಲಿ: ಕನಿಷ್ಠ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬುಧವಾರ ಬೆಳಿಗ್ಗಿನ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಚಳಿಯ ವಾತಾವರಣ ಮುಂದುವರಿದಿದೆ.

ಭಾರತೀಯ ಹವಾಮಾನ ಇಲಾಖೆಯು, ಶೀತಗಾಳಿ ಘೋಷಣೆ ಮಾನದಂಡಕ್ಕೆ ಅನುಗುಣವಾಗಿ ಮಂಗಳವಾರ ತಾಪಮಾನ ದಾಖಲಾಗಿತ್ತು. ಬುಧವಾರ ಅಂಥ ಸ್ಥಿತಿ ಇಲ್ಲ ಎಂದು ತಿಳಿಸಿದೆ.

ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಿ ಸತತ ಎರಡು ದಿನ ದಾಖಲಾದಲ್ಲಿ ಶೀತಗಾಳಿ ಸ್ಥಿತಿ ಇದೆ ಎಂದು ಘೋಷಿಸಲಾಗುತ್ತದೆ.

ತಾಪಮಾನವು ಮಂಗಳವಾರ 10ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ದಾಖಲಾಗಿತ್ತು. ಇದು, ಡಾಲ್‌ಹೌಸಿ  (10.9 ಡಿಗ್ರಿ ಸೆಲ್ಸಿಯಸ್), ಧರ್ಮಶಾಲಾ (10.6), ಹಿಮಾಚಲ ಪ್ರದೇಶದ ಮಂಡಿ (10.2) ಮತ್ತು ಉತ್ತರಾಖಂಡದ ಮುಸ್ಸೋರಿಯಲ್ಲಿ (10.4) ದಾಖಲಾಗಿದ್ದಕ್ಕಿಂತಲೂ ಕಡಿಮೆ ಇತ್ತು.

ಚಳಿಯ ವಾತಾವರಣ ಮುಂದಿನ ನಾಲ್ಕು, ಐದು ದಿನಗಳು ಹೀಗೇ ಮುಂದುವರಿಯಲಿವೆ ಎಂದು ಐಎಂಡಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು