ಸೋಮವಾರ, ನವೆಂಬರ್ 30, 2020
26 °C

ಕೋವಿಡ್ ಚಿಕಿತ್ಸೆಗೆ ಆಯುರ್ವೇದ ಔಷಧ ಭಾಗಶಃ ಪರಿಣಾಮಕಾರಿ: ಎಐಐಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆರಂಭಿಕ ಹಂತ ಅಥವಾ ಗಂಭೀರವಲ್ಲದ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಚಿಕಿತ್ಸೆಗೆ ಆಯುಷ್‌ನ ಕ್ವಾಥ್ ಮತ್ತು ಫಿಫಾಟ್ರೊಲ್‌ ಮಾತ್ರೆಗಳು ಪರಿಣಾಮಕಾರಿ ಎಂದು ದೆಹಲಿ ಮೂಲದ ಅಖಿಲ ಭಾರತ ಆಯುರ್ವೇದ ವೈದ್ಯಕೀಯ ಸಂಸ್ಥೆ (ಎಐಐಎ) ವೈದ್ಯರ ತಂಡ ಭಾನುವಾರ ಹೇಳಿದೆ.

ಆಯುರ್ವೇದದ ನಾಲ್ಕು ಚಿಕಿತ್ಸಾ ಕ್ರಮಗಳಾದ ಆಯುಷ್‌ ಕ್ವಾಥ, ಸಂಶಮನಿವತಿ, ಫಿಫಾಟ್ರೊಲ್‌ ಮಾತ್ರೆ, ಲಕ್ಷ್ಮೀವಿಲಾಸ ರಸಗಳ ಬಳಕೆಯಿಂದ ಕೋವಿಡ್ ರೋಗಿಯ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಕೇವಲ ಆರು ದಿನಗಳವೊಳಗೆ ರ್‍ಯಾ‍ಪಿಡ್ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್‌ ಸಿಗುತ್ತದೆ ಎಂದು ಎಐಐಎ ಜರ್ನಲ್‌ನಲ್ಲಿ ಪ್ರಕಟಿತ ವರದಿ ಹೇಳಿದೆ.

30 ವರ್ಷದ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿತ್ತು. ಸಂಶಮನ ಥೆರಪಿಯಿಂದಾಗಿ ಚೇತರಿಕೆ ಕಂಡುಬಂದಿದೆ. ಈ ಥೆರಪಿಯಡಿ ಆಯುಷ್‌ ಕ್ವಾಥ, ಸಂಶಮನಿವತಿ, ಫಿಫಾಟ್ರೊಲ್‌ ಮಾತ್ರೆ, ಲಕ್ಷ್ಮೀವಿಲಾಸ ರಸ ನೀಡಲಾಗುತ್ತದೆ ಎಂದುಹೇಳಿದೆ.

ಈ ಥೆರೆಪಿಯಿಂದ ಕೋವಿಡ್‌ ರೋಗಲಕ್ಷಣಗಳಾದ ಜ್ವರ, ಉಸಿರಾಟ ಸಂಬಂಧಿತ ಸಮಸ್ಯೆ, ಆಯಾಸ, ಅನೋಸ್ಮಿಯಾ, ಮತ್ತು ಡಿಸ್ಜೂಸಿಯಾ ಸಮಸ್ಯೆಗಳು ಗುಣಮುಖವಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಎಐಎಂಐಎಲ್ ಫಾರ್ಮಾಸ್ಯುಟಿಕಲ್ ಸಂಸ್ಥೆಯು ಫಿಫಾಟ್ರೋಲ್ ಅನ್ನು ಅಭಿವೃದ್ಧಿಪಡಿಸಿದೆ. ಇದು, ರೋಗನಿರೋಧಕ ಶಕ್ತಿ ವೃದ್ಧಿಸಲಿದ್ದು, ಗುಡುಚಿ, ಸಂಜೀವಿನಿ ಘನ್ವತಿ, ದಾರುಹರಿದ್ರಾ, ಅಪಮಾರ್ಗ, ಚಿರಾಯತ, ಕರಂಜ, ಕುಟಕಿ, ತುಳಸಿ, ಗೋದಂತಿ (ಭಾಸಂ), ಮೃತ್ಯುಂಜಯ ರಾಸ, ತ್ರಿಭುವನ ಕೃತಿ ರಾಸ ಮತ್ತು ಸಂಜೀವನಿ ಅನ್ನು ಬಳಸಲಾಗಿದೆ ಎಂದು ತಿಳಿಸಿದೆ.

ಈವರೆಗೆ ಕೋವಿಡ್‌ಗೆ ಚಿಕಿತ್ಸೆಗೆ ನಿರ್ದಿಷ್ಟ ಔಷಧ ಲಭ್ಯವಿಲ್ಲ. ವಿಶ್ವದಾದ್ಯಂತ ಸುಮಾರು 4.47 ಕೋಟಿ ಜನರು ಕೋವಿಡ್‌ನಿಂದ ಬಾಧಿತರಾಗಿದ್ದರೆ, 11.7 ಲಕ್ಷ ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು