ಕೋವ್ಯಾಕ್ಸಿನ್: 3ನೇ ಹಂತದ ಕ್ರಿನಿಕಲ್ ಟ್ರಯಲ್‌ಗೆ 26,000 ಸ್ವಯಂಸೇವಕರು

ಹೈದರಾಬಾದ್: ಭಾರತ್ ಬಯೋಟೆಕ್ ಸಂಸ್ಥೆಯು ಕೋವ್ಯಾಕ್ಸಿನ್‌ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗಾಗಿ 23,000 ಸ್ವಯಂ ಸೇವಕರನ್ನು ನೋಂದಣಿ ಮಾಡಿಕೊಂಡಿದೆ.
ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊರೊನಾ ಲಸಿಕೆ ‘ಕೋವ್ಯಾಕ್ಸಿನ್’ ಅನ್ನು ಅಭಿವೃದ್ಧಿಪಡಿಸಿದೆ.
‘ಮೂರನೇ ಹಂತದ ಪ್ರಯೋಗ ನವೆಂಬರ್ ಮಧ್ಯಭಾಗದಲ್ಲಿ ಆರಂಭವಾಗಿದೆ. ಸಂಸ್ಥೆಯು 26,000 ಸ್ವಯಂಸೇವಕರನ್ನು ಈ ಹಂತದ ಟ್ರಯಲ್‌ನಲ್ಲಿ ಒಳಪಡಿಸುವ ಗುರಿಯ ಹೊಂದಿದೆ. ಇದು ಭಾರತದಲ್ಲಿ ನಡೆಸಲಾಗುತ್ತಿರುವ ಅತಿ ದೊಡ್ಡ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆಗಿದೆ’ ಎಂದು ಸಂಸ್ಥೆಯು ಶನಿವಾರ ತಿಳಿಸಿದೆ.
ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲಾ ಅವರು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸಲು ಮುಂದಾದ ಎಲ್ಲ ತನಿಖಾಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಕೋವ್ಯಾಕ್ಸಿನ್‌ನ ಮೊದಲ ಮತ್ತು ಎರಡನೇ ಹಂತದ ಟ್ರಯಲ್‌ಗೆ 1,000 ಮಂದಿಯನ್ನು ಒಳಪಡಿಸಲಾಗಿತ್ತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.