ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಲಸಿಕೆ 'ಕೊವ್ಯಾಕ್ಸಿನ್' ವಿತರಣೆಗೆ ಸಜ್ಜು; ಇಂದು ಹೈದರಾಬಾದ್‌ನಿಂದ ರವಾನೆ

ಕೋವಿಡ್‌–19
Last Updated 12 ಜನವರಿ 2021, 10:29 IST
ಅಕ್ಷರ ಗಾತ್ರ

ಹೈದರಾಬಾದ್‌: ಕೋವಿಡ್‌–19 ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ಪಡೆದಿರುವ ದೇಶೀಯ ಸಂಸ್ಥೆ ಭಾರತ್‌ ಬಯೋಟೆಕ್‌, 'ಕೊವ್ಯಾಕ್ಸಿನ್‌' ರವಾನೆಗೆ ಸಜ್ಜಾಗಿದೆ. ಇಂದು ಸಂಜೆ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಸಿಕೆ ಕಳುಹಿಸಲು ಸಿದ್ಧತೆ ನಡೆದಿದೆ.

'ಮಂಗಳವಾರ ಸಂಜೆ ಭಾರತ್‌ ಬಯೋಟೆಕ್‌ನಿಂದ ಮೊದಲ ಹಂತದಲ್ಲಿ ಲಸಿಕೆ ಹೈದರಾಬಾದ್‌ನಿಂದ ಹೊರಗೆ ರವಾನೆಯಾಗಲಿದೆ. ಇಲ್ಲಿಂದ ನಿಗದಿತ 11 ಸ್ಥಳಗಳಿಗೆ ತಲುಪಲಿದೆ' ಎಂದು ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಲಸಿಕೆ ತಲುಪಿದೆ. 'ನಾವು ಸೀರಂ ಇನ್‌ಸ್ಟಿಟ್ಯೂಟ್‌ ಕಳುಹಿಸಿರುವ 970 ಕೆ.ಜಿ.ಯಷ್ಟು ಸರಕು ಪಡೆದಿದ್ದೇವೆ' ಎಂದಿದ್ದಾರೆ.

ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ತಯಾರಿಸುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ ಬಯೋಟೆಕ್‌ ಕಂಪನಿಯು ಐಸಿಎಂಆರ್‌ ಮತ್ತು ಎನ್‌ಐವಿ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದೆ.

ಲಸಿಕೆ ನೀಡಿಕೆ ಕಾರ್ಯಕ್ರಮದ ಡ್ರೈ ರನ್‌ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ನಡೆದಿದ್ದು, ಈಗ ಲಸಿಕೆ ಪೂರೈಕೆ ಕಾರ್ಯ ಚುರುಕಾಗಿದೆ. ಹೈದರಾಬಾದ್‌ ಜಗತ್ತಿನ ಪ್ರಮುಖ ಲಸಿಕೆ ಕೇಂದ್ರವಾಗಿರುವುದರಿಂದ ವಿಮಾನ ನಿಲ್ದಾಣಗಳ ಕಾರ್ಗೊ ವಿಭಾಗವು ಬೇಡಿಕೆ ತಕ್ಕಂತೆ ಕಾರ್ಯಾಚರಣೆಗೆ ಸಜ್ಜಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT