ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕಂಟೇನರ್‌, 12 ರಾಜ್ಯ, 260 ಜನ: ಭಾರತ್‌ ಜೋಡೊ ಯಾತ್ರೆಯ ವಿಶೇಷತೆಗಳು ಇಲ್ಲಿವೆ

Last Updated 10 ಸೆಪ್ಟೆಂಬರ್ 2022, 10:17 IST
ಅಕ್ಷರ ಗಾತ್ರ

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಂಚರಿಸುತ್ತಿರುವ ಕಾಂಗ್ರೆಸ್‌ನ ‘ಭಾರತ್‌ ಜೋಡೊ ಯಾತ್ರೆ’ ಹಲವು ವಿಶೇಷತೆಗಳಿಂದ ಕೂಡಿದೆ.

ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 230 ಜನರ ವಾಸ್ತವ್ಯಕ್ಕಾಗಿ 60 ಕಂಟೇನರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಕಂಟೇನರ್‌ಗಳನ್ನು ಹೊತ್ತಿರುವ ಟ್ರಕ್‌ಗಳು ದಿನವೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲಿವೆ. ಇದೇ ಕಂಟೇನರ್‌ನಲ್ಲಿಯೇ ರಾಹುಲ್‌ ಗಾಂಧಿ ತಂಗುತ್ತಿದ್ದಾರೆ.

ಈ ಕಂಟೇನರ್‌ಗಳಲ್ಲಿ ಸಣ್ಣ ಸೋಫಾ, ಏರ್ ಕಂಡಿಷನರ್, ಸಣ್ಣ ರೆಫ್ರಿಜರೇಟರ್ ಮತ್ತು ಅಟ್ಯಾಚ್ಡ್ ಟಾಯ್ಲೆಟ್‌ಗಳಿವೆ.

ಒಂದು ಬೆಡ್‌ ಹೊಂದಿರುವ ಕಂಟೇನರ್ ಅನ್ನು ರಾಹುಲ್‌ ಗಾಂಧಿ ಬಳಸುತ್ತಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ದಿಗ್ವಿಜಯ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಎರಡು ಬೆಡ್‌ಗಳ ಕಂಟೇನರ್‌ಗಳಲ್ಲಿ ತಂಗುತ್ತಿದ್ದಾರೆ.

ನಾಲ್ಕು, ಆರು, ಎಂಟು ಮತ್ತು ಹನ್ನೆಡರು ಬೆಡ್‌ಗಳನ್ನು ಹೊಂದಿರುವ ಕಂಟೇನರ್‌ಗಳೂ ಇವೆ. ಕೆಲವು ಶೌಚಾಲಯಗಳನ್ನು ಹೊಂದಿವೆ. ಕೆಲವು ಪಾದಯಾತ್ರಿಗಳು ಮೊಬೈಲ್ ಶೌಚಾಲಯಗಳನ್ನು ಬಳಸುತ್ತಿದ್ದಾರೆ..

ಸುಮಾರು 10 ಜನರು ಸಭೆ ನಡೆಸಬಹುದಾದ ಕಾನ್ಫರೆನ್ಸ್ ರೂಮ್ ಹೊಂದಿರುವ ಕಂಟೇನರ್ ಸಹ ಲಭ್ಯವಿದೆ.

ಈ ಎಲ್ಲ ಕಂಟೇನರ್‌ಗಳನ್ನು ಎರಡು ಎಕರೆ ಜಾಗದಲ್ಲಿ ನಿಲ್ಲಿಸಹುದಾಗಿದೆ. ಹೆಚ್ಚಾಗಿ ಶಾಲಾ ಹಾಗೂ ಕಾಲೇಜು ಮೈದಾನಗಳಲ್ಲಿ ವಾಸ್ತವ್ಯ ಹೂಡಲಾಗುತ್ತಿದೆ.

ಯಾತ್ರೆಯು ಸುಮಾರು ಐದು ತಿಂಗಳುಗಳ ಕಾಲ ನಡೆಯಲಿದೆ. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ.

119 ‘ಭಾರತ ಯಾತ್ರಿಗಳು’, ಸಹಾಯಕ ಸಿಬ್ಬಂದಿ, ಶಿಬಿರಗಳನ್ನು ನಿರ್ವಹಿಸುವ ಜನರು ಸೇರಿದಂತೆ ಒಟ್ಟು 260 ಜನರು ಯಾತ್ರೆಯಾದ್ಯಂತ ಇರಲಿದ್ದಾರೆ.

ಯಾತ್ರಿಗಳಿಗೆ ಆಹಾರದ ಪೂರೈಕೆಯನ್ನು ಪಕ್ಷದ ರಾಜ್ಯ ಘಟಕಗಳು ನಿರ್ವಹಿಸುತ್ತಿವೆ. ಯಾತ್ರೆಯು 3,570 ಕಿ.ಮೀ ಸಂಚರಿಸಲಿದೆ.

‘ಭಾರತ ಯಾತ್ರಿಗಳ’ ಸರಾಸರಿ ವಯಸ್ಸು 38. ಸುಮಾರು 50,000 ನಾಗರಿಕರು ಯಾತ್ರೆಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಶೇ 30ರಷ್ಟು 'ಭಾರತ ಯಾತ್ರಿಗಳು' ಮಹಿಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT