ಬುಧವಾರ, ಅಕ್ಟೋಬರ್ 21, 2020
21 °C

ಲಾಲು ಮಕ್ಕಳು: ಅಣ್ಣನಿಗೆ 30 ವರ್ಷ, ತಮ್ಮನಿಗೆ 31 ವರ್ಷ!

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ‘ಮಹಾಘಟಬಂಧನ’ದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ಬಿಹಾರ ವಿಧಾನಸಭೆಗೆ ಸ್ಪರ್ಧೆ ಬಯಸಿ ಸಲ್ಲಿಸಿರುವ ನಾಮಪತ್ರದಲ್ಲಿ ಇರುವ ಮಾಹಿತಿ ಅವರನ್ನು ಮುಜುಗರಕ್ಕೆ ತಳ್ಳಿದೆ.

ವೈಶಾಲಿ ಕ್ಷೇತ್ರದಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತೇಜಸ್ವಿ ಅವರು ತಮಗೆ 31 ವರ್ಷ ಎಂದು ನಮೂದಿಸಿದ್ದಾರೆ. ಆದರೆ ಅವರ ಅಣ್ಣ ತೇಜ್‌ಪ್ರತಾಪ್ ಅವರು ಸಮಸ್ತಿಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರದಲ್ಲಿ ತಮ್ಮ ವಯಸ್ಸು 30 ಎಂದು ಉಲ್ಲೇಖಿಸಿದ್ದಾರೆ. ಅಣ್ಣನಿಗಿಂತ ತಮ್ಮ ಒಂದು ವರ್ಷ ದೊಡ್ಡವ ಎಂಬುದು ಚರ್ಚೆಗೆ ಎಡೆಮಾಡಿದೆ. 

2015ರ ಚುನಾವಣೆಯಲ್ಲೂ ಹೀಗೆಯೇ ಆಗಿತ್ತು. ತೇಜಸ್ವಿ ಹಾಗೂ ತೇಜ್‌ ಪ್ರತಾಪ್ ಅವರು ತಮ್ಮ ವಯಸ್ಸನ್ನು ಕ್ರಮವಾಗಿ 26 ಮತ್ತು 25 ಎಂದು ನಮೂದಿಸಿದ್ದರು. ‘ಮತದಾರರ ಗುರುತಿನ ಚೀಟಿಯಲ್ಲಿರುವ ಪ್ರಕಾರ, ನನ್ನ ವಯಸ್ಸು 25 ವರ್ಷ’ ಎಂದು ತೇಜ್‌ಪ್ರತಾಪ್ ಹೇಳಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅದೇ ಗೊಂದಲ ಮುಂದುವರಿದಿದೆ. 

‘ವಯಸ್ಸಿನಿಂದ ಹಿಡಿದು ಆಸ್ತಿವರೆಗೆ ಅವರು ನೀಡಿರುವ ಮಾಹಿತಿ ತಪ್ಪಿನಿಂದ ಕೂಡಿವೆ’ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇಬ್ಬರು ಸಹೋದರರ ಆಸ್ತಿ ಹೆಚ್ಚಳವಾದ ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಪ್ರಮಾಣಪತ್ರ ಪ್ರಕಾರ ತೇಜಸ್ವಿ ಅವರ ಆಸ್ತಿ ₹5.88 ಕೋಟಿಗೆ (2015ರಲ್ಲಿ ₹2.32 ಕೋಟಿ) ಹಾಗೂ ತೇಜ್‌ಪ್ರತಾಪ್ ಅವರ ಆಸ್ತಿ ₹2.83 ಕೋಟಿಗೆ (2015ರಲ್ಲಿ ₹2.01 ಕೋಟಿ) ಏರಿಕೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು