ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಕೈಗೂಡದಿದ್ದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಲೋಕಜನಶಕ್ತಿ ಪಕ್ಷ (ಎಲ್ಜೆಪಿ) ಆಲೋಚಿಸುತ್ತಿದೆ.

ಬಿಜೆಪಿಯ ಸೀಟು ಹೊಂದಾಣಿಕೆ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕೇ ಅಥವಾ ಯೋಜನೆಯಂತೆ 143 ಕ್ಷೇತ್ರಗಳಲ್ಲಿ ಸ್ಪತಂತ್ರ ಸ್ಪರ್ಧೆ ಮಾಡಬೇಕೇ ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.243 ಸದಸ್ಯಬಲದ ವಿಧಾನಸಭೆಗೆ ಅಕ್ಟೋಬರ್ 1ರಿಂದ ಮತದಾನ ನಿಗದಿಯಾಗಿದ್ದು, ಪಕ್ಷ ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಬಿಜೆಪಿ ಹಾಗೂ ರಾಮ್ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ನಡುವೆ ಈವರೆಗೆ ಸೀಟು ಹೊಂದಾಣಿಕೆ ಸೂತ್ರ ಅಂತಿಮವಾಗಿಲ್ಲ. ಮೂಲಗಳ ಪ್ರಕಾರ ಎಲ್ಜೆಪಿಗೆ 27 ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಸ್ತಾವವಿದೆ.

ಕಳೆದ ಚುನಾವಣೆಯಲ್ಲಿ ಎಲ್ಜೆಪಿ ಸ್ಪರ್ಧಿಸಿದ್ದ 42 ಕ್ಷೇತ್ರಗಳಲ್ಲಿ 2ರಲ್ಲಿ ಮಾತ್ರ ಜಯ ಗಳಿಸಿತ್ತು.

ಪಕ್ಷ ನಿರೀಕ್ಷೆ ಇಟ್ಟುಕೊಂಡಿರುವ ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆ ಯಿದ್ದು, ಇದು ಮುಖಂಡರಲ್ಲಿ ಅಸ ಮಾಧಾನ ಮೂಡಿಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.