ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರ್‌ಭೂಮ್ ಹತ್ಯೆ: ಸಂಘಟಿತ, ಯೋಜಿತ ನರಮೇಧ–ಸಿಬಿಐ ವರದಿ

Last Updated 8 ಏಪ್ರಿಲ್ 2022, 16:28 IST
ಅಕ್ಷರ ಗಾತ್ರ

ಕೋಲ್ಕತ್ತ(ಪಿಟಿಐ): ಪಶ್ಚಿಮ ಬಂಗಾಳದ ಬೀರಭೂಮ್‌ನಲ್ಲಿ ನಡೆದ ಹತ್ಯೆ ಸಂಘಟಿತ ಮತ್ತು ಯೋಜಿತವಾಗಿ ನಡೆದ ನರಮೇಧವಾಗಿದೆ ಎಂದು ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡ ಭಾದು ಶೇಖ್ ಅವರ ಹತ್ಯೆಯ ಪ್ರತೀಕಾರವಾಗಿ ನಡೆದ ದುಷ್ಕೃತ್ಯ ಇದಾಗಿದೆ ಎಂದೂ ಅದು ಹೇಳಿದೆ.

ಮನೆಯೊಂದರಲ್ಲಿ ಸುಟ್ಟು ಹಾಕಲಾಗಿದ್ದ 7 ಮಂದಿ ಸಂತ್ರಸ್ತರ ದೇಹಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದ್ದು, ಅವರನ್ನು ಸಜೀವ ದಹನ ಮಾಡುವುದಕ್ಕೂ ಮುನ್ನ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ 20 ಪುಟಗಳ ವರದಿಯಲ್ಲಿ ಸಿಬಿಐ ತಿಳಿಸಿದೆ.

ಮಾರ್ಚ್ 21ರಂದು ಭಾದು ಶೇಖ್ ಅವರ ಹತ್ಯೆಯ ಬಳಿಕ ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪು, ತಮ್ಮ ಎದುರಾಳಿ ಗುಂಪಿನವರ ಮನೆಗಳಿಗೆ ತೆರಳಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಕುಟುಂಬ ಸದಸ್ಯರನ್ನು ಹತ್ಯೆ ಮಾಡುವ ಕೆಲಸವನ್ನು ಯೋಜಿತ ಮತ್ತು ಸಂಘಟಿತವಾಗಿ ಮಾಡಿದ್ದರು. ಇದರಿಂದಾಗಿ ಎದುರಾಳಿ ಗುಂಪಿನ 9 ಮಂದಿ ಬಲಿಯಾಗಿದ್ದರು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT