ಹಕ್ಕಿಜ್ವರ: ಮಹಾರಾಷ್ಟ್ರದಲ್ಲಿ ಆರು ಪಕ್ಷಿಗಳ ಮೃತ ದೇಹ ಪತ್ತೆ

ಔರಂಗಾಬಾದ್: ಮಹಾರಾಷ್ಟ್ರದ ಹಲವೆಡೆ ‘ಹಕ್ಕಿಜ್ವರ’ದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಬೀಡ್ ಜಿಲ್ಲೆಯಲ್ಲಿ ಮೂರು ನವಿಲು ಸೇರಿದಂತೆ ಆರು ಹಕ್ಕಿಗಳ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಶಿರೂರ್ ಕಸರ್ ತಾಲ್ಲೂಕಿನ ಲೋನಿ ಗ್ರಾಮದ ಬಳಿ ಈ ಹಕ್ಕಿಗಳ ಮೃತದೇಹ ಪತ್ತೆಯಾಗಿವೆ. ಸದ್ಯ ಈ ಪಕ್ಷಿಗಳ ಶವವನ್ನು ವಶಕ್ಕೆ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಮೂರು ಗಂಡು ನವಿಲು, ಎರಡು ಹೆಣ್ಣು ನವಿಲು ಸೇರಿದಂತೆ ಆರು ಪಕ್ಷಿಗಳ ಮೃತದೇಹ ಪತ್ತೆಯಾಗಿತ್ತು. ಈ ಪಕ್ಷಿಗಳು ಹಕ್ಕಿ ಜ್ವರದಿಂದಾಗಿ ಮೃತಪಟ್ಟಿದೆಯೇ ಎಂಬುದನ್ನು ಪತ್ತೆ ಹಚ್ಚಲು ಅವುಗಳ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದರು.
‘ಶಿರೂರ್ ಕಸರ್ ತಾಲ್ಲೂಕಿನಲ್ಲಿ ಜನವರಿ 12 ರಿಂದ ಈವರೆಗೆ ಒಟ್ಟು 21 ಕಾಗೆಗಳು ಸಾವಿಗೀಡಾಗಿವೆ. ಈ ಹಕ್ಕಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಒಂದು ಮಾದರಿಯಲ್ಲಿ ಮಾತ್ರ ಹಕ್ಕಿ ಜ್ವರ ತಗುಲಿರುವ ಪರೀಕ್ಷೆಯಿಂದ ದೃಢಪಟ್ಟಿತ್ತು’ ಎಂದು ಅವರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.