ಶನಿವಾರ, ಮೇ 28, 2022
31 °C

ಬಿಜೆಪಿಯು ಮಾಧ್ಯಮದ ನಡುವೆ ಹಾರಾಡುವ ಗಾಳಿ ತುಂಬಿದ ಬಲೂನ್‌: ಮಮತಾ ಬ್ಯಾನರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾ: ‘ಬಿಜೆಪಿ ಒಂದು ರೀತಿ ಗಾಳಿ ತುಂಬಿದ ಬಲೂನ್‌ನಂತಿದ್ದು, ಅದು ಮಾಧ್ಯಮಗಳಲ್ಲಿ ಮಾತ್ರ ಹಾರಾಡುತ್ತಾ ಜೀವಂತವಾಗಿದೆ ಮತ್ತು ಇದು ಅಡ್ಡ ದಾರಿಯಲ್ಲಿ ಹಣ ಸಂಪಾದಿಸಿದವರಿಗೆ ‘ವಾಷಿಂಗ್‌ ಮೆಷಿನ್‌‘ ಆಗಿದೆ‘ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ ಫೆಡರೇಷನ್ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಾವು ಸಂಗ್ರಹಿಸಿದ ಹಣವನ್ನು ಭದ್ರಪಡಿಸಿ ಕೊಳ್ಳಲು ಕೆಲವರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಅಂಥವರು ಒಂದೊಮ್ಮೆ ಟಿಎಂಸಿಯಲ್ಲೇ ಉಳಿದಿದ್ದರೂ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿರಲಿಲ್ಲ‘ ಎಂದು ಹೇಳಿದರು.

‘ಬಿಜೆಪಿಯವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಆ ಪಕ್ಷದವರ ಬಳಿ ಹಣವಿದೆ ಅಷ್ಟೇ. ಅದನ್ನು ಬಳಸಿಕೊಂಡು ಒಂದಷ್ಟು ಏಜೆನ್ಸಿಗಳ ಮೂಲಕ  ಹಾದಿ ಬೀದಿಗಳಲ್ಲಿ ಪಕ್ಷದ ಬಾವುಟಗಳನ್ನು ಕಟ್ಟಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿಯೇ ಅಧಿಕಾರಕ್ಕೆ ಬರುತ್ತದೆ. ‘ಮಾ –ಮಾಟಿ–ಮಾನ್ಷು(ಟಿಎಂಸಿ ಘೋಷವಾಕ್ಯ) ಘೋಷಣೆ ಮೊಳಗುತ್ತದೆ‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿಯವರನ್ನು ಮಾಧ್ಯಮದವರ ನಡುವೆ ಬಿಟ್ಟುಬಿಡಿ. ಟಿಎಂಸಿ ನಿಮ್ಮ ಹೃದಯದಲ್ಲಿ ನೆಲೆಸಿರುತ್ತದೆ. ನೀವು ನಮಗೆ ಭರವಸೆ ಕೊಡಿ. ನಾವು ನಿಮಗೆ ಭವಿಷ್ಯದಲ್ಲಿ ಉತ್ತಮ ಆಡಳಿತ ಕೊಡುವುದನ್ನು ಖಾತರಿಪಡಿಸುತ್ತೇವೆ‘ ಎಂದು ಮಮತಾ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು