ಭಾನುವಾರ, ಸೆಪ್ಟೆಂಬರ್ 27, 2020
26 °C

ನರೇಂದ್ರ ಮೋದಿ ಜನ್ಮದಿನ: ಬಿಜೆಪಿಯಿಂದ ‘ನಮೋ ಬಗ್ಗೆ ತಿಳಿಯಿರಿ’ ಕ್ವಿಜ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮದಿನದ ಅಂಗವಾಗಿ ಬಿಜೆಪಿಯು ‘ನಮೋ ಬಗ್ಗೆ ತಿಳಿಯಿರಿ’ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯ ವಿಜೇತರಿಗೆ ಪ್ರಧಾನಿಯವರ ಸಹಿ ಇರುವ ಪುಸ್ತಕಗಳು ಬಹುಮಾನವಾಗಿ ಸಿಗಲಿವೆ ಎಂದು ತಿಳಿಸಲಾಗಿದೆ.

ಕ್ವಿಜ್‌ ಇಂದು ಆರಂಭವಾಗಿದ್ದು, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

‘ಪ್ರಧಾನಿ ಮೋದಿ ಅವರ ಬಗ್ಗೆ ನಿಮಗೆಷ್ಟು ಗೊತ್ತು? ನಮೋ ಆ್ಯಪ್‌ನಲ್ಲಿ ‘ನಮೊ ಬಗ್ಗೆ ತಿಳಿಯಿರಿ ಕ್ವಿಜ್‌’ನಲ್ಲಿ ಭಾಗವಹಿಸಿ. ವಿಜೇತರು ನರೇಂದ್ರ ಮೋದಿ ಅವರ ಸಹಿ ಇರುವ ಪುಸ್ತಕವನ್ನು ಬಹುಮಾನ ಪಡೆಯಲಿದ್ದೀರಿ’ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಜೊತೆಗೆ ನಮೋ ಆ್ಯಪ್‌ ಮೂಲಕ ಪ್ರಧಾನಿ ಅವರಿಗೆ ಶುಭಾಶಯಗಳನ್ನು ತಿಳಿಸುವಂತೆಯೂ ಮನವಿ ಮಾಡಿರುವ ಬಿಜೆಪಿ, ‘ನೀವು ಮೋದಿ ಅವರಿಗೆ ಶುಭಾಶಯ ತಿಳಿಸಲು ಬಯಸುವುದಾದರೆ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ನಂತರ ವಿಡಿಯೊ ಚಿತ್ರೀಕರಿಸಿ ಅಪ್‌ಲೋಡ್‌ ಮಾಡಿ‌’ ಎಂದು ತಿಳಿಸಿದೆ.

ಮೋದಿ ಅವರ 70ನೇ ಜನ್ಮದಿನದ ಅಂಗವಾಗಿ ಬಿಜೆಪಿಯು ಇದೇ ತಿಂಗಳ 14ರಿಂದ 20ರ ವರೆಗೆ ‘ಸೇವಾ ಸಪ್ತಾಹ’ವನ್ನು ಆಯೋಜಿಸಿದೆ. ಈ ‘ಸಪ್ತಾಹ’ದ ಭಾಗವಾಗಿ ಪಕ್ಷವು ದೇಶದಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು